Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್
ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ: ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲ್‌ವುಳದ ಭೂಕುಸಿತ ಪೀಡಿತ ಪ್ರದೇಶಗಳಿಂದ ಇದುವರೆಗೆ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ವಿಪತ್ತಿನಲ್ಲಿ ಗಾಯಗೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ಗೆ ಬಂದಿದ್ದಾರೆ.
ಗುರುವಾರ (ಆಗಸ್ಟ್ 1) ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ʻʻಭೂಕುಸಿತ ಪೀಡಿತ ಮುಂಡಕ್ಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಮತ್ತು ರಕ್ಷಣಾ ಕಾರ್ಯಗಳನ್ನು ಸಂಘಟಿಸಲು ನಾಲ್ವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ.
ನಾಲ್ವರು ಸಚಿವರು-ಕಂದಾಯ ಸಚಿವ ಕೆ.ರಾಜನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒಆರ್ ಕೇಲು ಅವರು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ.
ʻʻಈ ರಕ್ಷಣಾ ಕಾರ್ಯ ಅಲ್ಪಾವಧಿಯಲ್ಲಿ ಮುಗಿಯುವಂತದ್ದಲ್ಲ. ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ವಿಜಯನ್ ಹೇಳಿದರು.
ಭಾರೀ ಪ್ರಮಾಣದಲ್ಲಿ ಮಣ್ಣಿನ ಶೇಖರಣೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರಂಭದಲ್ಲಿ ಕಷ್ಟವಾಗಿದ್ದರೂ, ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ ಕಾರ್ಯಾಚರಣೆಯು ಸುಲಭವಾಗುತ್ತದೆ ಎಂದರು.
ಭೂಕುಸಿತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದರಿಂದ ಸಿಕ್ಕಿಹಾಕಿಕೊಂಡಿರುವ ಸಾಕಷ್ಟು ಜನರನ್ನು ರಕ್ಷಿಸಬಹುದಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳಿಂದ 1,000 ಕ್ಕೂ ಹೆಚ್ಚು ರಕ್ಷಕರು ಬೃಹತ್ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.
ಮಂಗಳವಾರ ಮುಂಜಾನೆ ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.
ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://thefederal.com/category/live/wayanad-landslides-live-bailey-bridge-may-be-built-by-10-am-rahul-priyanka-leave-for-kerala-136458?infinitescroll=1