ವೈ.ಎಸ್. ಶರ್ಮಿಳಾ ಬಂಧನ-ಜಗನ್ ವಿರುದ್ಧ ವಾಗ್ದಾಳಿ
x

ವೈ.ಎಸ್. ಶರ್ಮಿಳಾ ಬಂಧನ-ಜಗನ್ ವಿರುದ್ಧ ವಾಗ್ದಾಳಿ


ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಫೆಬ್ರವರಿ 22 ರಂದು ವಿಜಯವಾಡದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರು ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ 'ಚಲೋ ಸೆಕ್ರೆಟರಿಯೇಟ್' ಮೆರವಣಿಗೆ ನಡೆಸುತ್ತಿದ್ದರು.

ಶರ್ಮಿಳಾ ಎಕ್ಸ್ ಖಾತೆಯಲ್ಲಿ ತನ್ನನ್ನು ಪೊಲೀಸರು ಕರೆದೊಯ್ಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಹೋದರ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಖಂಡಿಸಿದ್ದಾರೆ.

ʻಜಗನ್ ಪಕ್ಷದಲ್ಲಿ ಸಂವಿಧಾನದ ಕೊಲೆಯಾಗಿದೆ. ಈಡೇರಿಸದ ಭರವಸೆಗಳನ್ನು ಪ್ರಶ್ನಿಸಿದರೆ, ಬಂಧಿಸಿ ಸೆರೆಮನೆಯಯಲ್ಲಿಡುತ್ತೀರಾ?ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾದ ನನಗೇ ಹೀಗಾದರೆ, ಜನಸಾಮಾನ್ಯರ ಸ್ಥಿತಿ ಏನು? ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೋ ಅಥವಾ ರಾಜಪ್ರಭುತ್ವದಲ್ಲಿ ಇದ್ದೇವೋ?ʼ ಎಂದು ಪ್ರಶ್ನಿಸಿದ್ದಾರೆ.

ʻಮೆಗಾ ಡಿಎಸ್ಸಿ ಬೇಕು, ಡಿಎಸ್‌ಸಿ ಬೇಡ ಎಂದು ಸರ್ಕಾರಕ್ಕೆ ಅರ್ಜಿ ನೀಡಲು ಹೊರಟಿದ್ದ ನಮ್ಮನ್ನು ಪೊಲೀಸರು ಅಕ್ರಮವಾಗಿ ಬಂಧಿಸಿರುವುದು ಬೇಸರದ ಸಂಗತಿʼ ಎಂದು ತೆಲುಗಿನಲ್ಲಿ ಬರೆದಿದ್ದಾರೆ.

ʻಅಧಿಕಾರ ಶಾಶ್ವತವಲ್ಲ ಅನ್ನೋದು ನೆನಪಿರಲಿ. ಸೆಕ್ರೆಟರಿಯೆಟ್ ನಲ್ಲಿ ಮನವಿ ತೆಗೆದುಕೊಳ್ಳಲು ಯಾರೂ ಇಲ್ಲ. ಸಿಎಂ ಬರುವುದಿಲ್ಲ.. ಮಂತ್ರಿಗಳು ಬರುವುದಿಲ್ಲ.. ಅವರಿಗೆ ಆಳಲು ಬರುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿʼ ಎಂದು ಹೇಳಿದ್ದಾರೆ.

Read More
Next Story