ಆತಿಥೇಯ ಭಾರತವನ್ನು 36 ವರ್ಷಗಳ ಬಳಿಕ ಮಣಿಸಿದ ನ್ಯೂಜಿಲೆಂಡ್
ಭಾನುವಾರ (ಅಕ್ಟೋಬರ್ 20) ಬೆಂಗಳೂರಿನಲ್ಲಿ ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 36 ವರ್ಷಗಳ ಬಳಿಕ ಗೆಲುವು ಸಾಧಿಸಿ ತನ್ನ ದೀರ್ಘ ಕಾಲದ ಕನಸನ್ನು ನನಸಾಗಿಸಿತು.
ಜಸ್ಪ್ರೀತ್ ಬುಮ್ರಾ ಸ್ಪೆಲ್ ದಾಳಿಯನ್ನು ಎದುರಿಸಿದ ಕಿವೀಸ್ ಪಡೆ ಆತಿಥೇಯರ ಅಂತಿಮ ದಿನದ ಗೆಲುವಿನ ಪ್ರಯತ್ನವನ್ನು ವಿಫಲಗೊಳಿಸಿದರು. ಆ ಮೂಲಕ ಕ್ರಿಕೆಟ್ ದಿಗ್ಗಜ ಭಾರತವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದರು. 1988ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಜಾನ್ ರೈಟ್ ನೇತೃತ್ವದ ನ್ಯೂಜಿಲೆಂಡ್ ತಂಡವು ಭಾರತವನ್ನು 136 ರನ್‌ಗಳಿಂದ ಸೋಲಿಸಿದ ನಂತರ ಇದು ಭಾರತದ ನೆಲದಲ್ಲಿ ನ್ಯೂಜಿಲೆಂಡ್‌ನ ಮೊದಲ ಟೆಸ್ಟ್ ಜಯವಾಗಿದೆ.
ವಿಶ್ವ ದರ್ಜೆಯ ಭಾರತದ ದಾಳಿಯ ವಿರುದ್ಧ ಐದನೇ ದಿನದಂದು ಸಾಧಾರಣ 107 ರನ್‌ಗಳನ್ನು ಗಳಿಸುವ ಆತಂಕವಿದ್ದರೂ, ಅದನ್ನು ಕಿವೀಸ್ ಪಡೆ ಸಾಧಿಸಿ ಗೆಲುವಿನ ದಡ ಸೇರಿತು.
ಮುರಿಯದ 75 ರನ್ ಗಳ ಜೊತೆಯಾಟ
ವಿಲ್ ಯಂಗ್ (ಔಟಾಗದೆ 48) ಮತ್ತು ರಚಿನ್ ರವೀಂದ್ರ (ಔಟಾಗದೆ 39) ಮೂರನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟದೊಂದಿಗೆ ರನ್‌ಗಳನ್ನು ಬೆನ್ನತ್ತಿದರು. ಆ ಮೂಲಕ , ಮೂರು ಪಂದ್ಯಗಳ ಸರಣಿಯಲ್ಲಿ ತಮ್ಮ ತಂಡವನ್ನು 1-0 ಮುನ್ನಡೆಯತ್ತ ಕೊಂಡೊಯ್ದರು. ಪುಣೆಯಲ್ಲಿ ಎರಡನೇ ಟೆಸ್ಟ್ ಅಕ್ಟೋಬರ್ 24 ರಂದು ಪ್ರಾರಂಭವಾಗುವುದರಿಂದ ಭಾರತ ಸೇಡಿನ ತವಕದಲ್ಲಿದೆ.
ರೋಹಿತ್ ಶರ್ಮಾ ತಂಡವು ಎರಡನೇ ಪಂದ್ಯದಲ್ಲಿ 150 ರನ್ ಮಾಡಿದ ಸರ್ಫರಾಜ್ ಖಾನ್ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಆಳವಾಗಿ ಯೋಚಿಸಬೇಕಾಗಿದೆ, ಏಕೆಂದರೆ ಶುಭಮಾನ್ ಗಿಲ್ ಕುತ್ತಿಗೆಯಿಂದ ಚೇತರಿಸಿಕೊಂಡ ನಂತರ ಮರಳಲು ಸಿದ್ಧರಾಗಿದ್ದಾರೆ. ಮೂರು ವೇಗಿಗಳ ತಂತ್ರಕ್ಕೆ ಹಿಂತಿರುಗಬೇಕೆ ಅಥವಾ ಮೂವರು ಸ್ಪಿನ್ನರ್‌ಗಳನ್ನು ಮುಂದುವರಿಸಬೇಕೆ ಎಂಬುದು ಅವರು ದೀರ್ಘವಾಗಿ ಯೋಚಿಸಬೇಕಾದ ಅಂಶವಾಗಿದೆ.