ಶ್ರೀಲಂಕಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಜಯಸೂರ್ಯ ಆಯ್ಕೆ
x
ಸನತ್ ಜಯಸೂರ್ಯ

ಶ್ರೀಲಂಕಾ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಜಯಸೂರ್ಯ ಆಯ್ಕೆ

ಜುಲೈ ನಲ್ಲಿ ಭಾರತ- ಶ್ರೀಲಂಕಾ ನಡುವೆ ಸೀಮಿತ ಓವರ್ ಗಳ ಸರಣಿ ನಡೆಯಲಿದ್ದು, ಆಗಸ್ಟ್ ನಲ್ಲಿ ಲಂಕಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಜಯಸೂರ್ಯ ಅವರನ್ನು ಮುಖ್ಯ ಕೋಚ್ ನ್ನಾಗಿ ಆಯ್ಕೆ ಮಾಡಲಾಗಿದೆ.

Click the Play button to hear this message in audio format

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಸೋಮವಾರ ಆಯ್ಕೆಗೊಂಡಿದ್ದಾರೆ.

ಜುಲೈ ನಲ್ಲಿ ಭಾರತ- ಶ್ರೀಲಂಕಾ ನಡುವೆ ಸೀಮಿತ ಓವರ್ ಗಳ ಸರಣಿ ನಡೆಯಲಿದ್ದು, ಆಗಸ್ಟ್ ನಲ್ಲಿ ಲಂಕಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಜಯಸೂರ್ಯ ಅವರನ್ನು ಮುಖ್ಯ ಕೋಚ್ ನ್ನಾಗಿ ಆಯ್ಕೆ ಮಾಡಲಾಗಿದೆ.

ಜಯಸೂರ್ಯ ಮಾರ್ಗದರ್ಶನದಲ್ಲಿ ಶ್ರೀಲಂಕಾ, 27 ವರ್ಷಗಳಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ದ್ವಿಪಕ್ಷೀಯ ODI ಸರಣಿಯನ್ನು ಗೆದ್ದುಕೊಂಡಿತ್ತು. ಬಳಿಕ 10 ವರ್ಷಗಳಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಅನ್ನು ವಿದೇಶಿ ಟೆಸ್ಟ್‌ನಲ್ಲಿ ಸೋಲಿಸಿತು. ಇತ್ತೀಚೆಗಷ್ಟೇ ಶ್ರೀಲಂಕಾ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿತ್ತು.

"ಜಯಸೂರ್ಯ ಅವರು ಹಂಗಾಮಿ ಮುಖ್ಯ ಕೋಚ್ ಆಗಿ ಉಸ್ತುವಾರಿ ವಹಿಸಿದ್ದಾಗ ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಪ್ರವಾಸಗಳಲ್ಲಿ ತಂಡದ ಉತ್ತಮ ಪ್ರದರ್ಶನವನ್ನು ಪರಿಗಣಿಸಿ ಶ್ರೀಲಂಕಾ ಕ್ರಿಕೆಟ್‌ನ ಕಾರ್ಯಕಾರಿ ಸಮಿತಿಯು ಈ ನಿರ್ಧಾರವನ್ನು ಮಾಡಿದೆ" ಎಂದು ಎಸ್‌ಎಲ್‌ಸಿ ಪ್ರಕಟನೆಯಲ್ಲಿ ತಿಳಿಸಿದೆ.

ಅಕ್ಟೋಬರ್ 1, 2024 ರಂದು ನೇಮಕಾತಿ ಜಾರಿಗೆ ಬಂದಿದೆ. ಮಾರ್ಚ್ 31, 2026 ರವರೆಗೆ ಅವರು ಕೋಚ್‌ ಆಗಿ ಮಾರ್ಗದರ್ಶನ ನೀಡಲಿದ್ದಾರೆ. ಕೋಚ್ ಆಗಿ ಅವರ ಮೊದಲ ನಿಯೋಜನೆಯು ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಾಗಿದ್ದು, ಅಕ್ಟೋಬರ್ 13 ರಂದು ದಂಬುಲ್ಲಾದಲ್ಲಿ ಈ ಪಂದ್ಯ ಆರಂಭವಾಗಲಿದೆ.

Read More
Next Story