ಜಮೀರ್ ಆಡಿಯೋ ಬಾಂಬ್! ಮುಸ್ಲಿಂ ದಂಗಲ್ ಶುರುವಾಗುತ್ತಾ?
ಜಮೀರ್ ಅವರದ್ದು ಎನ್ನಲಾದ ಆಡಿಯೋ ವೈರಲ್- ಕಾಂಗ್ರೆಸ್‌ನಲ್ಲಿ ಸಂಚಲನ
Zameer audio Viral:
ದಾವಣಗೆರೆ ಉಪಚುನಾವಣೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಅಡಿಯೋ ಈಗ ಸಂಚಲನಕ್ಕೆ ಕಾರಣವಾಗಿದೆ. ದಾವಣಗೆರೆ ಉಪಚುನಾವಣೆಯ ಬಗ್ಗೆ ಮುಸ್ಲಿಂ ಮತಗಳ ಕುರಿತು ಕೆಎಂಡಿಸಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಜೊತೆಗಿನ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಂ ಮತಗಳು ಬಾರದಂತೆ ಮಾತನಾಡಿರುವುದು ಆಡಿಯೊದಲ್ಲಿದೆ. ಇದರ ಬೆನ್ನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದು ಅದು ನನ್ನ ಆಡಿಯೋ ಅಲ್ಲ ಇದು ನಕಲಿ ಎಂದು ಹೇಳಿದ್ದಾರೆ. ಇದೇ ಆಡಿಯೋ ಇಟ್ಟುಕೊಂಡು ಕಾಂಗ್ರೆಸ್ ನಲ್ಲಿ ಸಚಿವಸ್ಥಾನ ಸಂಬಂಧಿಸಿದಂತೆ ಮುಸ್ಲಿಂ ಶಾಸಕರು ರಾಜಕೀಯ ಶುರುಮಾಡಿದ್ದಾರೆ.
Next Story

