ಜುಲೈ–ಆಗಸ್ಟ್‌ನಲ್ಲಿ ಮಳೆ ಆಗುತ್ತಾ? | ಎಲ್ ನಿನೊ ಪರಿಣಾಮ ಎಷ್ಟು? | IMD ವಿಜ್ಞಾನಿ ಸಿ.ಎಸ್. ಪಾಟೀಲ್ ವಿಶೇಷ ಸಂದರ್ಶನ
ರಾಜ್ಯದಲ್ಲಿ ಮಳೆ ಕೊರತೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ವಾಡಿಕೆಗಿಂತ ಶೇಕಡಾ 50ರಷ್ಟು ಕಡಿಮೆ ಮಳೆಯಾಗಿರುವುದರಿಂದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು, ಸಾರ್ವಜನಿಕರು ಹಾಗೂ ಸರ್ಕಾರದ ಗಮನ ಈಗ ಜುಲೈ ಮತ್ತು ಆಗಸ್ಟ್ ತಿಂಗಳ ಮಳೆಯತ್ತ ನೆಟ್ಟಿದೆ. ಈ ಎರಡೂ ತಿಂಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಗಳು ತುಂಬುವ ಸಾಧ್ಯತೆ ಇದೆ. ಎಲ್ ನಿನೊ ಪರಿಣಾಮದಿಂದ ಈ ಬಾರಿ ಮಳೆ ವಿಳಂಬವಾಗಿದೆಯೇ? ಮುಂದಿನ ದಿನಗಳಲ್ಲಿ ಮಳೆ ಚುರುಕುಗೊಳ್ಳುತ್ತದೆಯೇ? ಬರದ ಭೀತಿ ಎಷ್ಟು ಗಂಭೀರವಾಗಿದೆ? ಮುಂಗಾರು ಹಳಿ ಹಿಡಿಯುವ ಲಕ್ಷಣಗಳಿವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಉತ್ತರಿಸಿದ್ದಾರೆ. ರಾಜ್ಯದ ಮುಂದಿನ ಹವಾಮಾನ ಸ್ಥಿತಿ, ಮಳೆಯ ಸಾಧ್ಯತೆ, ರೈತರು ಗಮನಿಸಬೇಕಾದ ಅಂಶಗಳು ಹಾಗೂ ಎಲ್ ನಿನೊ ಪರಿಣಾಮದ ಕುರಿತು ಮಹತ್ವದ ಮಾಹಿತಿಯನ್ನು ಈ ಸಂದರ್ಶನದಲ್ಲಿ ತಿಳಿದುಕೊಳ್ಳಬಹುದು.