x

56% ಮೀಸಲಾತಿ ಜಾರಿಯಾಗದಿದ್ದರೆ ಉಗ್ರ ಹೋರಾಟ: ಸಂಜಯ್ ಕುಮಾರ್ ಸ್ವಾಮೀಜಿ ಎಚ್ಚರಿಕೆ

11 May 2026 5:06 PM IST

ಶೇಕಡಾ 56ರಷ್ಟು ಮೀಸಲಾತಿ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಇಂದು ಮಹತ್ವದ ಸಭೆ ನಡೆಸಿದೆ. ಬೆಂಗಳೂರಿನ ವಾಲ್ಮೀಕಿ ಪ್ರತಿಮೆ ಬಳಿ ನಡೆದ ಈ ಸಭೆಯಲ್ಲಿ ಸ್ವಾಮೀಜಿಗಳು ಸೇರಿದಂತೆ ಸಮಾಜದ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಮೀಸಲಾತಿ ಜಾರಿಗೆ ಬರದಿದ್ದರೆ ರಾಜ್ಯಾದ್ಯಂತ ನಡೆಯಲಿರುವ ಹೋರಾಟದ ರೂಪುರೇಷೆಗಳ ಬಗ್ಗೆ ಇಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಹೋರಾಟದ ಮುಂದಿನ ಹೆಜ್ಜೆಗಳು ಹಾಗೂ ಮೀಸಲಾತಿಯ ಅಗತ್ಯತೆಯ ಬಗ್ಗೆ ಶಿಡ್ಲೆಕೋಣ ಮಠದ ಸ್ವಾಮೀಜಿಯವರಾದ ಶ್ರೀ ಸಂಜಯ್ ಕುಮಾರ್ ಅವರು 'ದ ಫೆಡರಲ್ ಕರ್ನಾಟಕ'ದ ಜೊತೆ ವಿಶೇಷವಾಗಿ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವಿಡಿಯೋ ವೀಕ್ಷಿಸಿ ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.