ಪುತ್ರ ವ್ಯಾಮೋಹದ ಬಲೆ? ಯತೀಂದ್ರಗೆ ಡಿಸಿಎಂ ಆಫರ್‌ಗೆ ಸಿದ್ದರಾಮಯ್ಯ ನೋ ಅಂದಿದ್ದೇಕೆ?

30 May 2026 5:56 PM IST

ಕರ್ನಾಟಕದ ರಾಜಕೀಯದ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ಹಾಗೂ ವಿಪರ್ಯಾಸದ ಘಟ್ಟ. ಎಪ್ಪತ್ತರ ದಶಕ, ಎಂಭತ್ತರ ದಶಕದಲ್ಲಿ ಯಾರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಸಿಡಿದೆದ್ದರೋ... ಡೆಲ್ಲಿ ದರ್ಬಾರ್ ಸಂಸ್ಕೃತಿಯನ್ನು ಟೀಕಿಸುತ್ತಾ ಬೆಳೆದರೋ... ಅದೇ ನಾಯಕ ಈಗ ಡೆಲ್ಲಿ ನಾಯಕರ ಮಾತಿಗೆ ಒಪ್ಪಿ ಸಿಎಂ ಹುದ್ದೆಯನ್ನು ತೊರೆದಿದ್ದಾರೆ. ಅವರೇ ಮಾಸ್ ಲೀಡರ್, ಅಹಿಂದ ನಾಯಕ ಸಿದ್ದರಾಮಯ್ಯ... ಇವತ್ತು ಅದೇ ಸಿದ್ದರಾಮಯ್ಯನವರ ಮೇಲೆ 'ಪುತ್ರ ವ್ಯಾಮೋಹ'ದ ಕಳಂಕ ಮೆತ್ತಿಕೊಳ್ಳುತ್ತಿದೆಯಾ? ಸಿದ್ದರಾಮಯ್ಯನವರೇ ತಮ್ಮ ಮಗನನ್ನು ಮುಂದಿಟ್ಟುಕೊಂಡು ವಂಶಪಾರಂಪರ್ಯ ರಾಜಕಾರಣಕ್ಕೆ ಇಳಿದರಾ ಅನ್ನೋ ಚರ್ಚೆ ಇಂದು ವಿಧಾನಸೌಧದ ಮೊಗಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.