ಕಂಪನಿಗಳಿಗೆ ತಲೆನೋವಾಗಿದ್ದ ಟ್ರಾಫಿಕ್, ರಸ್ತೆಗುಂಡಿ ಸಮಸ್ಯೆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಕಂಟಕ
ಬೆಂಗಳೂರಿನ ಅತ್ಯಂತ ಹೆಚ್ಚು ವಾಹನ ದಟ್ಟಣೆ ಪ್ರದೇಶಗಳಾದ ವೈಟ್‌ಫೀಲ್ಡ್, ಮಹಾದೇವಪುರ ಹಾಗೂ ಐಟಿಪಿಎಲ್ ಭಾಗಗಳಿಂದ ಬಂದ ಅಭ್ಯರ್ಥಿಗಳು ರಸ್ತೆ ಗುಂಡಿಗಳ ಕಾರಣ ಯುಪಿಎಸ್‌ಇ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಿದ್ದರಿಂದ ಅವಕಾಶ ವಂಚಿತರಾಗಿ ಒಂದು ವರ್ಷದ ಪರಿಶ್ರಮ ವ್ಯರ್ಥವಾಗಿದೆ. ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ನಡೆದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆಯಲು ಬಂದವರು ಎಷ್ಟೇ ಅಂಗಲಾಚಿದರೂ ಪರೀಕ್ಷಾ ಕೇಂದ್ರದ ಒಳಗೆ ಬಿಡಲಿಲ್ಲ. ಇದರಿಂದ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ ಮನೆಗೆ ವಾಪಸಾಗಬೇಕಾಯಿತು.