LIVE | ತಮಿಳುನಾಡಿನಲ್ಲಿ 6 ದಶಕಗಳ ದ್ರಾವಿಡ ಚಳವಳಿಗೆ ಭಾರಿ ಹಿನ್ನಡೆ! | TN Election 2026

4 May 2026 3:19 PM IST

ಭಾರತದ ರಾಜಕೀಯ ಇತಿಹಾಸದಲ್ಲಿ ತಮಿಳುನಾಡಿನ 'ದ್ರಾವಿಡ ಚಳವಳಿ'ಗೆ ಒಂದು ಪ್ರತ್ಯೇಕ ಹಾಗೂ ಬಲಿಷ್ಠ ಸ್ಥಾನವಿತ್ತು. ಆದರೆ 2026ರ ವಿಧಾನಸಭಾ ಚುನಾವಣೆಯು ಈ 6 ದಶಕಗಳ ಐತಿಹಾಸಿಕ ದ್ರಾವಿಡ ರಾಜಕಾರಣಕ್ಕೆ ಬಹುದೊಡ್ಡ ಪೆಟ್ಟು ನೀಡಿದೆ! ಪೆರಿಯಾರ್ ಅವರ 'ಆತ್ಮಗೌರವ ಚಳವಳಿ'ಯಿಂದ ಶುರುವಾಗಿ, ಸಿ.ಎನ್. ಅಣ್ಣಾದೊರೈ, ಕರುಣಾನಿಧಿ, ಎಂಜಿಆರ್ ಹಾಗೂ ಜಯಲಲಿತಾ ಅವರಂತಹ ಘಟಾನುಘಟಿ ನಾಯಕರು ಕಟ್ಟಿಬೆಳೆಸಿದ ದ್ರಾವಿಡ ಕೋಟೆ ಇಂದು ಅಕ್ಷರಶಃ ಬಿರುಕು ಬಿಟ್ಟಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಸಾಂಪ್ರದಾಯಿಕ ಸೈದ್ಧಾಂತಿಕ ರಾಜಕಾರಣವನ್ನು ಯುವಜನತೆ ತಿರಸ್ಕರಿಸಿದ್ದಾರೆ. ಕೇವಲ ಹಿಂದಿ ವಿರೋಧ ಮತ್ತು ಹಳೆಯ ಭಾವನಾತ್ಮಕ ಅಜೆಂಡಾಗಳು ಇನ್ನು ಮುಂದೆ ತಮಿಳುನಾಡಿನಲ್ಲಿ ವರ್ಕ್ ಆಗುವುದಿಲ್ಲ ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ.