x

ದೆಹಲಿಯಲ್ಲಿ ಪವರ್ ಪ್ಲಾನ್ , ಸಹಿ ಸಂಗ್ರಹ ಅಭಿಯಾನ ವದಂತಿಗೆ ಸತೀಶ್ ಸ್ಪಷ್ಟನೆ, ಬಿಡದಿ ರೈತ ಹೋರಾಟಕ್ಕೆ ಬೆಂಬಲ


Click the Play button to hear this message in audio format

ನವದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹೈಕಮಾಂಡ್ ನಾಯಕರೊಂದಿಗೆ ಸರಣಿ ಸಭೆ ನಡೆಸುತ್ತಿದ್ದು, ಹೊಸ ಸರ್ಕಾರ ರಚನೆಗೆ ಕಸರತ್ತು‌ ನಡೆಸುತ್ತಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ವಿರುದ್ಧದ ಸಹಿ ಸಂಗ್ರಹ ಅಭಿಯಾನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ನಂತರ ತಾವೇ ಅಹಿಂದ ವರ್ಗಗಳನ್ನು ಮುನ್ನಡೆಸುವುದಾಗಿ ಹೇಳಿದ್ದಾರೆ. ಬಿಡದಿಯಲ್ಲಿ ರೈತರು ನಡೆಸುತ್ತಿರುವ ರೈತರ ಹೋರಾಟಕ್ಕೆ ಇದೀಗ ದೇವನಹಳ್ಳಿಯ‌ ಚನ್ನರಾಯಪಟ್ಟಣ ರೈತರು ಬೆಂಬಲ ಸೂಚಿಸಿದ್ದು, ಶುಕ್ರವಾರ ಭೈರಮಂಗಲ‌ ಚಲೋ ನಡೆಸಿದರು.

Read More
Next Story