RSS ನೋಂದಣಿ ಮಾಡಿಸದಿದ್ದರೆ ಕಾನೂನು ಕ್ರಮ, "ಮಿಲಿಟರಿ ತಂದು ನಿಲ್ಲಿಸುತ್ತಾರಾ?"|ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ್

22 Jun 2026 7:16 PM IST

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನೊಂದಣಿ ವಿಚಾರ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನ ಕಾನೂನುಬದ್ಧ ಸ್ಥಿತಿ, ನೊಂದಣಿ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿರುವುದು ಬಿಜೆಪಿ ಹಾಗೂ RSS ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹಾಗೂ RSS ಸರಸಂಘಚಾಲಕ ಮೋಹನ್ ಭಾಗವತ್, ಸಂಘಕ್ಕೆ ನೊಂದಣಿ ಅವಶ್ಯಕತೆಯಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ್, "ಒಂದು ಪೆಟ್ಟಿ ಅಂಗಡಿ ನೊಂದಣಿ ಮಾಡಿಸದಿದ್ದರೆ ಏನಾಗುತ್ತದೋ, ಅದೇ ಕಾನೂನು RSSಗೂ ಅನ್ವಯವಾಗಬೇಕು" ಎಂದು ವಾದಿಸಿದ್ದಾರೆ.ದ ಫೆಡರಲ್ ಕರ್ನಾಟಕ ಜತೆಗಿನ ವಿಶೇಷ ಸಂದರ್ಶನದಲ್ಲಿ ಎಂ. ಲಕ್ಷ್ಮಣ್ ಅವರು RSS ನೊಂದಣಿ ವಿವಾದ, ಪ್ರಿಯಾಂಕ್ ಖರ್ಗೆ ಅವರ ಪತ್ರದ ಉದ್ದೇಶ, ಕಾನೂನು ಪ್ರಕ್ರಿಯೆ ಹಾಗೂ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಸಂಘರ್ಷದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.