ನನ್ನ ಪ್ರಶ್ನೆಗೆ RSSನಿಂದ ಹೇಗೆ ಉತ್ತರ ಪಡೆಯುವುದು ಗೊತ್ತಿದೆ; ಬೆದರಿಕೆ ಬರುತ್ತಿದೆ. DONT CARE PRIYANKA KHARGE

26 Jun 2026 9:34 PM IST

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಪ್ರಕ್ರಿಯೆ ಮತ್ತು ಸಂಘಟನೆಯ ಕಾರ್ಯವೈಖರಿಯ ಕುರಿತು ಸರಣಿ ಪ್ರಶ್ನೆಗಳನ್ನು ಎತ್ತಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿರುವ ಅವರು, ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪ್ರಶ್ನೆಗಳಿಗೆ ಆರ್.ಎಸ್.ಎಸ್ ನೇರವಾಗಿ ಉತ್ತರಿಸಬೇಕೇ ಹೊರತು, ಸಂಘಟನೆಯ ಪರವಾಗಿ ಬೇರೆಯವರಿಂದ ಹೇಳಿಕೆ ಕೊಡಿಸುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ಕೇಳಿರುವ ಎಂಟು ಪ್ರಶ್ನೆಗಳಿಗೆ ಆರ್.ಎಸ್.ಎಸ್ ಸೂಕ್ತ ಉತ್ತರ ನೀಡಲೇಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಿ ಸಂಘಟನೆಯ ಪದಾಧಿಕಾರಿಗಳನ್ನು ವಿಚಾರಣೆಗೆ ಕರೆಸಬೇಕಾಗುತ್ತದೆ ಎಂದು ಗೃಹ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸಂಘಟನೆಯೊಂದರ ನೋಂದಣಿ ಹಾಗೂ ಚಟುವಟಿಕೆಗಳ ಬಗ್ಗೆ ಸಂವಿಧಾನಬದ್ಧವಾಗಿ ಪ್ರಶ್ನೆಗಳನ್ನು ಕೇಳುವ ಅಧಿಕಾರ ತನಗಿದೆ ಎಂದು ಸಮರ್ಥಿಸಿಕೊಂಡಿರುವ ಅವರು, ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಆ ಎಂಟು ಪ್ರಶ್ನೆಗಳಾವುವು? ಆರ್.ಎಸ್.ಎಸ್ ಈ ಸವಾಲಿಗೆ ಹೇಗೆ ಪ್ರತಿಕ್ರಿಯಿಸುತ್ತದೆ? ಈ ವಿವಾದ ಎಲ್ಲಿಗೆ ಹೋಗಿ ನಿಲ್ಲಲಿದೆ? ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳ ಸಂಪೂರ್ಣ ವಿವರಕ್ಕಾಗಿ ಈ ವಿಶೇಷ ವಿಡಿಯೋವನ್ನು ವೀಕ್ಷಿಸಿ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಪ್ರಕ್ರಿಯೆ ಮತ್ತು ಸಂಘಟನೆಯ ಕಾರ್ಯವೈಖರಿಯ ಕುರಿತು ಸರಣಿ ಪ್ರಶ್ನೆಗಳನ್ನು ಎತ್ತಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿರುವ ಅವರು, ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪ್ರಶ್ನೆಗಳಿಗೆ ಆರ್.ಎಸ್.ಎಸ್ ನೇರವಾಗಿ ಉತ್ತರಿಸಬೇಕೇ ಹೊರತು, ಸಂಘಟನೆಯ ಪರವಾಗಿ ಬೇರೆಯವರಿಂದ ಹೇಳಿಕೆ ಕೊಡಿಸುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ಕೇಳಿರುವ ಎಂಟು ಪ್ರಶ್ನೆಗಳಿಗೆ ಆರ್.ಎಸ್.ಎಸ್ ಸೂಕ್ತ ಉತ್ತರ ನೀಡಲೇಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಿ ಸಂಘಟನೆಯ ಪದಾಧಿಕಾರಿಗಳನ್ನು ವಿಚಾರಣೆಗೆ ಕರೆಸಬೇಕಾಗುತ್ತದೆ ಎಂದು ಗೃಹ ಸಚಿವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಸಂಘಟನೆಯೊಂದರ ನೋಂದಣಿ ಹಾಗೂ ಚಟುವಟಿಕೆಗಳ ಬಗ್ಗೆ ಸಂವಿಧಾನಬದ್ಧವಾಗಿ ಪ್ರಶ್ನೆಗಳನ್ನು ಕೇಳುವ ಅಧಿಕಾರ ತನಗಿದೆ ಎಂದು ಸಮರ್ಥಿಸಿಕೊಂಡಿರುವ ಅವರು, ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಆ ಎಂಟು ಪ್ರಶ್ನೆಗಳಾವುವು? ಆರ್.ಎಸ್.ಎಸ್ ಈ ಸವಾಲಿಗೆ ಹೇಗೆ ಪ್ರತಿಕ್ರಿಯಿಸುತ್ತದೆ? ಈ ವಿವಾದ ಎಲ್ಲಿಗೆ ಹೋಗಿ ನಿಲ್ಲಲಿದೆ? ಎಂಬಿತ್ಯಾದಿ ಕುತೂಹಲಕಾರಿ ವಿಷಯಗಳ ಸಂಪೂರ್ಣ ವಿವರಕ್ಕಾಗಿ ಈ ವಿಶೇಷ ವಿಡಿಯೋವನ್ನು ವೀಕ್ಷಿಸಿ.