LIVE | SIRನಲ್ಲಿ BLOಗಳ ಲೋಪ: ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ | Nikhil Kumaraswamy

3 July 2026 2:38 PM IST

ರಾಮನಗರದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಭಾರಿ ಲೋಪಗಳು ನಡೆದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ನಿಯಮದ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಆಯೋಗದ ಗಣತಿ ನಮೂನೆಗಳನ್ನು ವಿತರಿಸಬೇಕು. ಆದರೆ, ಅಧಿಕಾರಿಗಳು ಮನೆಗಳಿಗೆ ತೆರಳುವ ಬದಲಿಗೆ ಸಮುದಾಯ ಭವನದಲ್ಲೇ ಕುಳಿತು ಅರ್ಜಿಗಳನ್ನು ವಿತರಣೆ ಮಾಡುತ್ತಿದ್ದಾರೆ ಎಂಬ ದೂರುಗಳು ವ್ಯಕ್ತವಾಗಿವೆ. ಈ ಕುರಿತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿರುವ BLOಗಳನ್ನು ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಸಂಪೂರ್ಣ ಲೈವ್ ಪ್ರತಿಕ್ರಿಯೆ ಮತ್ತು ಘಟನೆಯ ವಿವರ ಇಲ್ಲಿದೆ. ರಾಜ್ಯ ರಾಜಕೀಯದ ಕ್ಷಣ ಕ್ಷಣದ ಮಾಹಿತಿಗಾಗಿ ವಿಡಿಯೋ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನಮ್ಮ ಚಾನಲ್ ಸಬ್‌ಸ್ಕ್ರೈಬ್ ಮಾಡಲು ಮರೆಯದಿರಿ.