NCERT ಕನ್ನಡ ಪುಸ್ತಕ 'ಕೇಸರೀಕರಣ' , ಮೊಟ್ಟೆ-ಮಾಂಸ ಮಾಯ; ಕನ್ನಡ ಅಸ್ಮಿತೆ ಇಲ್ಲ, ಸಾಂಸ್ಕೃತಿಕ ದಬ್ಬಾಳಿಕೆಗೆ ಕಿಡಿ
ಎನ್‌ಸಿಇಆರ್‌ಟಿ (NCERT) ಪ್ರಕಟಿಸಿರುವ 6ನೇ ತರಗತಿಯ 'R3' ಕನ್ನಡ ಪಠ್ಯಪುಸ್ತಕದ ವಿರುದ್ಧ ಕರ್ನಾಟಕದಲ್ಲಿ ಹೊಸ ವಿವಾದ ಆರಂಭವಾಗಿದೆ. ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸಂಘಟನೆ, ಪುಸ್ತಕದ ಹೆಸರು 'ಕೃಷ್ಣ' ಎಂದು ಇಡುವುದರಿಂದ ಹಿಡಿದು ಆಹಾರ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರವನ್ನು ಕಡೆಗಣಿಸಿರುವುದರವರೆಗೆ ಹಲವು ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ಪುಸ್ತಕದಲ್ಲಿ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆ ಪ್ರತಿಬಿಂಬಿಸಿಲ್ಲ, ಪುರಾಣ ಮತ್ತು ಧಾರ್ಮಿಕ ಸಂಕೇತಗಳ ಮೂಲಕ ಶಿಕ್ಷಣವನ್ನು 'ಕೇಸರೀಕರಣ' ಮಾಡುವ ಪ್ರಯತ್ನ ನಡೆದಿದೆ, ಸಮತೋಲನ ಆಹಾರದ ಹೆಸರಿನಲ್ಲಿ ಸಸ್ಯಾಹಾರವನ್ನು ಮಾತ್ರ ಉತ್ತೇಜಿಸಲಾಗಿದೆ ಎಂದು ಪಾಫ್ರೆ ಆರೋಪಿಸಿದೆ. ಹಾಗಾದರೆ ಈ ವಿವಾದದ ಮೂಲವೇನು? 'ಕೃಷ್ಣ' ಹೆಸರಿನ ಬಗ್ಗೆ ಆಕ್ಷೇಪ ಏಕೆ? ಆಹಾರ ಪಾಠದಲ್ಲಿ ಏನಿದೆ? ಪಾಫ್ರೆ ಮುಂದಿಟ್ಟಿರುವ ಐದು ಪ್ರಮುಖ ಬೇಡಿಕೆಗಳೇನು? ಈ ವಿಡಿಯೊದಲ್ಲಿ ಸಂಪೂರ್ಣ ವಿವರ.