ಪ್ರಸ್ತಾವನೆ ಕೈಬಿಟ್ಟ ಕೇಂದ್ರ; ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣನಾ?
ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜೀವನಾಡಿಯಾದ ಮಹದಾಯಿ ಯೋಜನೆಗೆ ಮತ್ತೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ. ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಕೇಳಿದ್ದ ಪ್ರಶ್ನೆಗಳಿಗೆ ಕರ್ನಾಟಕ ಸರ್ಕಾರ ಸರಿಯಾದ ಕಾಲಮಿತಿಯಲ್ಲಿ ಸ್ಪಷ್ಟೀಕರಣ ನೀಡದ ಹಿನ್ನೆಲೆಯಲ್ಲಿ, ಕೇಂದ್ರ ಅರಣ್ಯ ಸಚಿವಾಲಯವು ಕರ್ನಾಟಕದ ಪ್ರಸ್ತಾವನೆಯನ್ನೇ ಪಟ್ಟಿಯಿಂದ ಕೈಬಿಟ್ಟಿದೆ.