ಮನೆ ತುಂಬ ದೂಳು, ಉಸಿರಾಡಲೂ ಪರದಾಟ: ಕಲ್ಲು ಕ್ವಾರಿಗಳ ಹಾವಳಿಗೆ ಮಾದಾಪಟ್ಟಣ ಗ್ರಾಮಸ್ಥರ ನರಕ ಯಾತನೆ

3 July 2026 7:37 PM IST

ಬಂಡೆ ಉರುಳಿ ಬಿದ್ದು 7 ಮಂದಿ ಮೃ...ತಪಟ್ಟ ದುರಂದ ನಡೆದ ಮಾದಾಪಟ್ಟಣ ಗ್ರಾಮದ ಕ್ವಾರಿಯಿಂದ ಬರುವ ಧೂಳಿನಿಂದಾಗಿ ಜನರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಯೊಳಗೂ ಧೂಳು ಆವರಿಸಿದ್ದು, ಜನಸಾಮಾನ್ಯರು ನೆಮ್ಮದಿಯಾಗಿ ಉಸಿರಾಡಲೂ ಪರದಾಡುವಂತಹ ಶೋಚನೀಯ ದುಸ್ಥಿತಿ ನಿರ್ಮಾಣವಾಗಿದೆ. ಕಲ್ಲು ಕ್ವಾರಿಗಳ ನಿರಂತರ ಕಾರ್ಯಾಚರಣೆ ಹಾಗೂ ಬೃಹತ್ ವಾಹನಗಳ ಓಡಾಟದಿಂದಾಗಿ ಇಡೀ ಗ್ರಾಮವೇ ದೂಳಿನಿಂದ ಆವೃತವಾಗಿದೆ. ಕುಡಿಯುವ ನೀರು, ಆಹಾರ, ಬಟ್ಟೆಬರೆಗಳೆಲ್ಲವೂ ದೂಳಿನಿಂದ ಹಾಳಾಗುತ್ತಿದ್ದು, ಸಣ್ಣ ಮಕ್ಕಳು ಹಾಗೂ ವೃದ್ಧರು ಉಸಿರಾಟದ ತೊಂದರೆ ಸೇರಿದಂತೆ ತೀವ್ರ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕ್ವಾರಿ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗ್ರಾಮಸ್ಥರ ಸಂಕಷ್ಟದ ಗ್ರೌಂಡ್ ರಿಪೋರ್ಟ್ ಈ ವಿಡಿಯೋದಲ್ಲಿದೆ.