LIVE | ಎಸ್‌ಐಆರ್; ಮನೆ ಮನೆಗೆ ಭೇಟಿ ಶುರು | ತುಮಕೂರು ಬಾಂಬ್ ಸ್ಫೋ**ಟ ಪ್ರಕರಣಕ್ಕೆ ಹೊಸ ತಿರುವು

30 Jun 2026 5:11 PM IST

ರಾಜ್ಯಾದ್ಯಂತ ಇಂದಿನಿಂದ 'ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ' (SIR) ಅಭಿಯಾನ ಆರಂಭವಾಗಿದೆ. ಜುಲೈ 29ರವರೆಗೆ ಮನೆ-ಮನೆಗೆ BLO ಅಧಿಕಾರಿಗಳು ಭೇಟಿ ನೀಡಲಿದ್ದು, ಈ ವೇಳೆ ತಪ್ಪು ಮಾಹಿತಿ ನೀಡಿದರೆ ಅಥವಾ ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರದ ಗ್ಯಾರಂಟಿ ಸೌಲಭ್ಯಗಳು ಕಟ್ ಆಗುವ ಎಚ್ಚರಿಕೆಯನ್ನು ಸಿಎಂ ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿರುವ 'ಶಾಶ್ವತ ನಿವಾಸ ಪ್ರಮಾಣಪತ್ರ'ದ ಸಂಪೂರ್ಣ ವಿವರ. ಕಾರಿನಲ್ಲೇ ಪ್ರೇಯಸಿಗೆ ಚಾಕುವಿನಿಂದ ಇರಿದು, ಬಾಂಬ್ ಸ್ಫೋಟಿಸಿಕೊಂಡು ಮೃತಪಟ್ಟ ನಾಗೇಂದ್ರಗೌಡನ ಪ್ರಕರಣದ ಹಿಂದೆ ಬೃಹತ್ ಶಸ್ತ್ರಾಸ್ತ್ರ ಜಾಲವೇ ಬಯಲಾಗಿದೆ. ಎಸ್ಐಟಿ (SIT) ತನಿಖೆಯಿಂದ ಮಲೆನಾಡು ಮತ್ತು ಕರಾವಳಿಯ ದಟ್ಟ ಅರಣ್ಯಗಳಲ್ಲಿ ಕೇವಲ 100-300 ರೂಪಾಯಿಗೆ ಮಾರಾಟವಾಗುತ್ತಿರುವ 'ಮಾಂಸದ ಬಾಂಬ್' ಮತ್ತು ಕಳ್ಳಬಂದೂಕುಗಳ ಆಘಾತಕಾರಿ ಸತ್ಯ ಹೊರಬಿದ್ದಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (Cross Voting) ನಡೆದಿದೆ ಎಂಬ ಆರೋಪಕ್ಕೆ ಪ್ರತಿಯಾಗಿ, ಬೇಲೂರು ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ಅವರು ದೇವರ ಮೊರೆ ಹೋಗಿದ್ದಾರೆ. ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಭಾವುಕರಾದ ಅವರು, ಬೇಲೂರಿನ ಚನ್ನಕೇಶವ ಸ್ವಾಮಿ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.