ಶೇ.12.5 ವೇತನ ಹೆಚ್ಚಳ ತಿರಸ್ಕರಿಸಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ, ಮುಷ್ಕರ ನಡೆಸಿಯೇ ಸಿದ್ಧ ಎಂದ ಒಕ್ಕೂಟ

13 May 2026 6:09 PM IST

ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು (KSRTC Employee Protest) ಮೇ 20 ಕ್ಕೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಸರ್ಕಾರ ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳವನ್ನು ತಿರಸ್ಕರಿಸಿರುವ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.‌ ʼದ ಫೆಡರಲ್ ಕರ್ನಾಟಕʼ ಜತೆ ಜಂಟಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ವಿಜಯಭಾಸ್ಕರ್ ಮಾತನಾಡಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಘೋಷಣೆ ಮಾಡಿದರು. ಇದೇ ವೇಳೆ ಸರ್ಕಾರ ಎಸ್ಮಾ ಜಾರಿ ಮಾಡಿದರೂ, ನ್ಯಾಯಾಲಯ ಮುಷ್ಕರ ಮಾಡಬೇಡಿ ಅಂದರೂ ಈ ಬಾರಿ ನಾವು ಮುಷ್ಕರ ಮಾಡುತ್ತೇವೆ. ಒಂದೇ ಒಂದು ಬಸ್ ರಸ್ತೆಗಿಳಿಯಲ್ಲ ಎಂದು ಹೇಳಿದರು. ಸಂದರ್ಶನದ ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ