ಕೊಡಗು ರಕ್ಷಿಸದಿದ್ದರೆ ಮುಂದೆ ಅಪಾಯ; ಜನಾಂದೋಲನ ಆಗಬೇಕಿದೆ: ಜೋಸೆಫ್ ಹೂವರ್ | Save Kodagu
ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಯ ಉಗಮ ತಾಣ ಕೊಡಗಿನ ಸಂರಕ್ಷಣೆಗೆ ಇದೀಗ ಮತ್ತೊಮ್ಮೆ ಬಲವಾದ ಕೂಗು ಕೇಳಿಬಂದಿದೆ. ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ ಕಂದಾಯ ಕಾಯ್ದೆ 1964ರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿದೆ. ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಗೆ ಅವಕಾಶ ನೀಡಬಾರದು, ಸ್ಥಳೀಯ ಜಮ್ಮಾ ಹಿಡುವಳಿದಾರರನ್ನು ಹೊರತುಪಡಿಸಿ ಇತರರಿಂದ ಭೂ ಸ್ವಾಧೀನವನ್ನು ನಿಯಂತ್ರಿಸಬೇಕು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ವೇದಿಕೆ ಮುಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿರುವ ಕೊಡಗು ಕಾವೇರಿ ರಕ್ಷಣಾ ವೇದಿಕೆ ಸಂಚಾಲಕ, ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಹಾಗೂ ಪರಿಸರ ಹೋರಾಟಗಾರ ಜೋಸೆಫ್ ಹೂವರ್, ಕೊಡಗಿನ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡ, ಕಾವೇರಿ ಜಲಾನಯನ ಪ್ರದೇಶದ ಮಹತ್ವ ಮತ್ತು ಮುಂದಿನ ದಿನಗಳಲ್ಲಿ ಅಗತ್ಯವಾಗಿರುವ ಜನಾಂದೋಲನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.