x

ಡಿಕೆಶಿ ಸಂಪುಟ: ರಾಜೀನಾಮೆಗೆ ಮುಂದಾದ ಶಾಸಕರು; ಸಲೀಂ ಅಹ್ಮದ್‌ ಸಭಾಪತಿ; ಹೆಚ್ಚಿದ ಜಲಾಶಯಗಳ ನೀರಿನ ಮಟ್ಟ

3 Aug 2026 7:29 PM IST

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅತೃಪ್ತಿಯ ಜ್ವಾಲೆ ಹೊತ್ತಿಕೊಂಡಿದೆ. ಹೈಕಮಾಂಡ್ ನಿರ್ಧಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಅಪ್ಪಾಜಿ ನಾಡಗೌಡ ಸೇರಿದಂತೆ ಪ್ರಮುಖ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಕೆ. ರೆಹಮಾನ್ ಖಾನ್ ಬಳಿಕ ಸಲೀಂ ಅಹ್ಮದ್ ಅವರಿಗೆ ಸಭಾಪತಿ ಸ್ಥಾನ ದಕ್ಕಿದೆ. ನಾಲ್ಕು ದಶಕಗಳ ನಂತರ ಮುಸ್ಲಿಂ ಸಮುದಾಯದ ನಾಯಕ ಸಲೀಂ ಅಹ್ಮದ್ ಅವರಿಗೆ ಸಭಾಪತಿ ಪೀಠ ಒಲಿದುಬಂದಿದೆ. ಒಂದು ಕಡೆ ಭರ್ತಿಯಾಗುತ್ತಿರುವ ಜಲಾಶಯಗಳಿಂದ ರೈತರ ಮೊಗದಲ್ಲಿ ಮಂದಹಾಸ, ಮತ್ತೊಂದು ಕಡೆ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಮಳೆ ಅನಾಹುತಗಳ ಆರ್ಭಟ. ಕಬಿನಿ, ಕೆಆರ್‌ಎಸ್ ಹರಿವು ಹೆಚ್ಚಳದಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅತೃಪ್ತಿಯ ಜ್ವಾಲೆ ಹೊತ್ತಿಕೊಂಡಿದೆ. ಹೈಕಮಾಂಡ್ ನಿರ್ಧಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಅಪ್ಪಾಜಿ ನಾಡಗೌಡ ಸೇರಿದಂತೆ ಪ್ರಮುಖ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಕೆ. ರೆಹಮಾನ್ ಖಾನ್ ಬಳಿಕ ಸಲೀಂ ಅಹ್ಮದ್ ಅವರಿಗೆ ಸಭಾಪತಿ ಸ್ಥಾನ ದಕ್ಕಿದೆ. ನಾಲ್ಕು ದಶಕಗಳ ನಂತರ ಮುಸ್ಲಿಂ ಸಮುದಾಯದ ನಾಯಕ ಸಲೀಂ ಅಹ್ಮದ್ ಅವರಿಗೆ ಸಭಾಪತಿ ಪೀಠ ಒಲಿದುಬಂದಿದೆ. ಒಂದು ಕಡೆ ಭರ್ತಿಯಾಗುತ್ತಿರುವ ಜಲಾಶಯಗಳಿಂದ ರೈತರ ಮೊಗದಲ್ಲಿ ಮಂದಹಾಸ, ಮತ್ತೊಂದು ಕಡೆ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಮಳೆ ಅನಾಹುತಗಳ ಆರ್ಭಟ. ಕಬಿನಿ, ಕೆಆರ್‌ಎಸ್ ಹರಿವು ಹೆಚ್ಚಳದಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.