x

Internal Reservation | ಶೀಘ್ರವೇ ಒಳ ಮೀಸಲು ಜಾರಿಗೊಳಿಸದಿದ್ದರೆ ತಕ್ಕ ಪಾಠ, ಡಿಎಸ್‌ಎಸ್‌ ಎಚ್ಚರಿಕೆ

23 April 2026 9:29 AM IST

ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಒಳ ಮೀಸಲಾತಿ ಕಾರಣ ನೀಡಿ ಯಾವುದೇ ನೇಮಕಾತಿ ನಡೆಸಿಲ್ಲ. ಒಳ ಮೀಸಲಾತಿಯನ್ನೂ ಜಾರಿಗೊಳಿಸಿಲ್ಲ. ಧಾರವಾಡ, ಬೆಂಗಳೂರು, ವಿಜಯಪುರ ಸೇರಿದಂತೆ ವಿವಿಧೆಡೆ ಸ್ಪರ್ಧಾರ್ಥಿಗಳು ಹೋರಾಟ ನಡೆಸಿದ ನಂತರ, ಒಂದು ತಿಂಗಳೊಳಗೆ 56 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಇದವರೆಗೂ ಯಾವುದೇ ನೇಮಕಾತಿ ನಡೆಸಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದೀಗ ಈ ಅಧಿಸೂಚನೆಯಲ್ಲೂ ಒಳ ಮೀಸಲು ಅನುಸರಿಸಿಲ್ಲ. ಇದು ಸರ್ಕಾರ ಒಳ ಮೀಸಲಾತಿ ಹೋರಾಟಗಾರರಿಗೆ ಮಾಡುತ್ತಿರುವ ಅನ್ಯಾಯ ಎಂದು ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಒಳ ಮೀಸಲಾತಿ ಕಾರಣ ನೀಡಿ ಯಾವುದೇ ನೇಮಕಾತಿ ನಡೆಸಿಲ್ಲ. ಒಳ ಮೀಸಲಾತಿಯನ್ನೂ ಜಾರಿಗೊಳಿಸಿಲ್ಲ. ಧಾರವಾಡ, ಬೆಂಗಳೂರು, ವಿಜಯಪುರ ಸೇರಿದಂತೆ ವಿವಿಧೆಡೆ ಸ್ಪರ್ಧಾರ್ಥಿಗಳು ಹೋರಾಟ ನಡೆಸಿದ ನಂತರ, ಒಂದು ತಿಂಗಳೊಳಗೆ 56 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

ಆದರೆ ಇದವರೆಗೂ ಯಾವುದೇ ನೇಮಕಾತಿ ನಡೆಸಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದೀಗ ಈ ಅಧಿಸೂಚನೆಯಲ್ಲೂ ಒಳ ಮೀಸಲು ಅನುಸರಿಸಿಲ್ಲ. ಇದು ಸರ್ಕಾರ ಒಳ ಮೀಸಲಾತಿ ಹೋರಾಟಗಾರರಿಗೆ ಮಾಡುತ್ತಿರುವ ಅನ್ಯಾಯ ಎಂದು ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.