ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಭರ್ಜರಿ ಗುಡ್ ನ್ಯೂಸ್: ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಯೋಜನೆ ಜಾರಿ
ದೇಶದ ಕಾರ್ಮಿಕರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ 'ಕಾರ್ಮಿಕ ಸಂಹಿತೆ' ಅಡಿಯಲ್ಲಿ ಭರ್ಜರಿ ಸಿಹಿಸುದ್ದಿ ನೀಡಿದೆ. 40 ವರ್ಷ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೂ ಇನ್ಮುಂದೆ ಉಚಿತವಾಗಿ ವಾರ್ಷಿಕ ಆರೋಗ್ಯ ತಪಾಸಣೆ (Free Annual Health Check-up) ಸೌಲಭ್ಯ ಸಿಗಲಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ನವದೆಹಲಿಯ ಇಎಸ್‌ಐಸಿ (ESIC) ಆಸ್ಪತ್ರೆಯಲ್ಲಿ ಈ ಮಹತ್ವದ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. 'ಶ್ರಮೇವ ಜಯತೇ' ಆಶಯದಡಿ ಜಾರಿಗೆ ಬಂದಿರುವ ಈ ಯೋಜನೆಯು ಕೇವಲ ಒಂದು ದಿನದ ಕ್ಯಾಂಪ್ ಆಗಿರದೆ, ಕಾರ್ಮಿಕರು ವರ್ಷದ ಯಾವುದೇ ಸಮಯದಲ್ಲಿ ತಮಗೆ ಸಮೀಪವಿರುವ ಇಎಸ್‌ಐಸಿ ಆಸ್ಪತ್ರೆಗೆ ಭೇಟಿ ನೀಡಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.