LIVE | ಇಂಧನ ಬೆಲೆ ಏರಿಕೆ ನಡುವೆ ಗಿಗ್ ಕಾರ್ಮಿಕರ ಬದುಕು ದುಸ್ತರ; ದುಡಿಮೆ ಹೆಚ್ಚು ಕಡಿಮೆ ಗಳಿಕೆ
ನಾವು ಮೊಬೈಲ್‌ನಲ್ಲಿ ಒಂದೇ ಒಂದು ಕ್ಲಿಕ್ ಮೂಲಕ ಆರ್ಡರ್ ಕನ್ಫರ್ಮ್ ಮಾಡಿದಾಗ, ಬಿಸಿಲಿರಲಿ, ಮಳೆಯಿರಲಿ ನಮ್ಮ ಮನೆ ಬಾಗಿಲಿಗೆ ನಿಗದಿತ ಸಮಯಕ್ಕೆ ಬಂದು ನಿಲ್ಲುವ ಆ ಡೆಲಿವರಿ ಬಾಯ್ಸ್ ಅಥವಾ 'ಗಿಗ್ ಕಾರ್ಮಿಕರ' (Gig Workers) ಕಣ್ಣೀರಿನ ಕಥೆ ಇದು. ಕರ್ನಾಟಕವೊಂದರಲ್ಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಹಾಗೂ ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಯುವಕರು ಈ ಆನ್‌ಲೈನ್ ವಿತರಣಾ ಜಾಲದಲ್ಲಿ ಹಗಲಿರುಳು ಬೆವರು ಸುರಿಸುತ್ತಿದ್ದಾರೆ. ಆದರೆ, ಗಗನಮುಖಿಯಾಗಿರುವ ಪೆಟ್ರೋಲ್ ದರ ಏರಿಕೆ, ಕಮಿಷನ್ ದರಗಳ ಯಥಾಸ್ಥಿತಿ ಮತ್ತು ಕಾರ್ಪೊರೇಟ್ ಕಂಪನಿಗಳ ಅಮಾನವೀಯ ಲೆಕ್ಕಾಚಾರದಿಂದಾಗಿ ಇವರ ಬದುಕು ಇಂದು ಬೀದಿಗೆ ಬೀಳುವಂತಾಗಿದೆ. ದಿನಕ್ಕೆ 14 ರಿಂದ 16 ಗಂಟೆಗಳ ಕಾಲ ರಸ್ತೆಯಲ್ಲೇ ಕಳೆದು ದುಡಿದರೂ, ಪೆಟ್ರೋಲ್ ಖರ್ಚು ಕಳೆದು ಇವರ ಕೈಗೆ ಸಿಗುತ್ತಿರುವುದು ಕೇವಲ 300 ರಿಂದ 350 ರೂಪಾಯಿ ಮಾತ್ರ! ಉದ್ಯೋಗಿಗಳ ಬದಲಿಗೆ 'ಪಾಲುದಾರರು' (Partners) ಎಂದು ಕರೆದು ಪಿಎಫ್, ಇಎಸ್‌ಐ ಸೌಲಭ್ಯಗಳಿಂದ ಜಾರಿಕೊಳ್ಳುತ್ತಿರುವ ಬಹುಕೋಟಿ ಅಗ್ರಿಗೇಟರ್ ಕಂಪನಿಗಳ ಶೋಷಣೆಯ ಸಂಪೂರ್ಣ ಆರ್ಥಿಕ ಲೆಕ್ಕಾಚಾರವನ್ನು ಈ ವೀಡಿಯೊದಲ್ಲಿ ವಿವರಿಸಲಾಗಿದೆ.