ಸಚಿವ ಸ್ಥಾನ ಸಿಗಲಿದೆ ಎಂದು ಖುಷಿಪಟ್ಟ ಗಾಯತ್ರಿ ಶಾಂತೇಗೌಡಗೆ ಕೊನೆ ಕ್ಷಣದಲ್ಲಿ ಶಾಕ್; ಅವರು ಹೇಳಿದ್ದೇನು?
ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಆರಂಭದಲ್ಲಿ ಬಿಡುಗಡೆಯಾದ 20 ಸಚಿವರ ಪಟ್ಟಿಯಲ್ಲಿ ಮಹಿಳಾ ಕೋಟಾದಡಿ ಕಾಂಗ್ರೆಸ್ ಶಾಸಕಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಸೇರಿತ್ತು. ಸಚಿವ ಸ್ಥಾನ ಖಚಿತವಾಗಿದೆ ಎಂಬ ವಿಶ್ವಾಸದಲ್ಲಿ ಗಾಯತ್ರಿ ಶಾಂತೇಗೌಡ ಅವರು ದ ಫೆಡರಲ್ ಕರ್ನಾಟಕ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದರು. "ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಇನ್ನೂ ಮೂವರು ಮಹಿಳೆಯರಿಗೆ ಸಚಿವ ಸ್ಥಾನ ನೀಡಬೇಕಿತ್ತು" ಎಂದು ಅವರು ಹೇಳಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ರಾಜಕೀಯ ಸಮೀಕರಣಗಳು ಬದಲಾಗಿದ್ದು, ಅಂತಿಮ ಪಟ್ಟಿಯಿಂದ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಕೈಬಿಡಲಾಯಿತು. ಸಚಿವ ಸ್ಥಾನ ಘೋಷಣೆಗೆ ಮುನ್ನ ಖುಷಿಯಿಂದ ಮಾತನಾಡಿದ್ದ ಅವರ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.