ಯಾದಗಿರಿಯ ರಾಮಸಮುದ್ರದಲ್ಲಿ ರೈತರ ಕಾಲುದಾರಿಗೆ ಮುಳ್ಳಾದ ಅರಣ್ಯ ಇಲಾಖೆ!
ಯಾದಗಿರಿಯ ರಾಮಸಮುದ್ರ ಗ್ರಾಮದ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನೂರಾರು ವರ್ಷಗಳಿಂದ ತಮ್ಮ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ಸಾಂಪ್ರದಾಯಿಕ ಹಾದಿಯನ್ನು ಅರಣ್ಯ ಇಲಾಖೆಯು ನಿರ್ಬಂಧಿಸುತ್ತಿದೆ. ಇದರಿಂದ 13 ಕಿ.ಮೀ ಸುತ್ತುಬಳಸಿ ಹೋಗುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ರೈತರ ಪರವಾಗಿ ಹೋರಾಟಕ್ಕಿಳಿದಿದ್ದು, ನ್ಯಾಯ ಸಿಗುವುದೇ ಕಾದು ನೋಡಬೇಕಿದೆ.