x

ಇನಾಂ ರದ್ದತಿಯಲ್ಲಿ ಕಳೆದುಹೋದ ರೈತರ ಕನಸುಗಳು: ಘೋಷಣೆಗೂ ವಾಸ್ತವಕ್ಕೂ ಇದೆಯೇ ಕಂದಕ?

13 May 2026 9:50 AM IST

ಸ್ವಾತಂತ್ರ್ಯಾನಂತರದ ಭಾರತದಲ್ಲಿ ರೈತ ಸಮುದಾಯದ ಬದುಕನ್ನು ಬದಲಿಸಿದ ಅತಿದೊಡ್ಡ ಕ್ರಾಂತಿ ಎಂದರೆ ಅದು ಭೂ ಸುಧಾರಣೆ. ಬ್ರಿಟಿಷರ ಮತ್ತು ಜಮೀನ್ದಾರಿ ಪದ್ಧತಿಯ ಕಪಿಮುಷ್ಠಿಯಿಂದ ರೈತರನ್ನು ಬಿಡಿಸಿ, 'ಉಳುವವನೇ ಭೂಮಿಯ ಒಡೆಯ' ಎಂದು ಘೋಷಿಸಿದಾಗ ಹಳ್ಳಿಗಳಲ್ಲಿ ಹೊಸ ಭರವಸೆ ಚಿಗುರಿತ್ತು. ಆದರೆ, ವಾಸ್ತವವೇ ಬೇರೆ ಇದೆ. ದಶಕಗಳು ಕಳೆದರೂ ಇನಾಂ ರದ್ದತಿ ಎಂಬ ಜಟಿಲ ಕಾನೂನು ಪ್ರಕ್ರಿಯೆಗಳು ಮಾತ್ರ ಇಂದಿಗೂ ರೈತರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿವೆ. ದಾಖಲೆಗಳ ಕೊರತೆ, ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಕಾನೂನಿನ ಸಂಕೀರ್ಣತೆಗಳಿಂದಾಗಿ ಅದೆಷ್ಟೋ ರೈತರು ತಮ್ಮ ಸ್ವಂತ ಭೂಮಿಯ ಹಕ್ಕಿಗಾಗಿ ಇಂದಿಗೂ ಕಚೇರಿ ಅಲೆಯುತ್ತಿದ್ದಾರೆ. ಈ ವಿಡಿಯೋದಲ್ಲಿ ಇನಾಂ ರದ್ದತಿ ಕಾಯಿದೆಯ ಇಂದಿನ ಸ್ಥಿತಿ ಮತ್ತು ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಮಗ್ರವಾಗಿ ವಿಶ್ಲೇಷಿಸಲಾಗಿದೆ.