ನಕಲಿ ಔಷಧ ಜಾಲಕ್ಕೆ ಇಂಟರ್ನ್ಯಾಷನಲ್ ಲಿಂಕ್: ಖಾದರ್
ರಾಜ್ಯದಲ್ಲಿ ಪತ್ತೆಯಾದ ಬೃಹತ್ ನಕಲಿ ಔಷಧ ಜಾಲಕ್ಕೆ ಈಗ 'ಇಂಟರ್ನ್ಯಾಷನಲ್ ಲಿಂಕ್' ಇರುವುದು ಸ್ಪಷ್ಟವಾಗಿದೆ. ಬಿಡದಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದರ ಪ್ರಮುಖ ರೂವಾರಿ ದುಬೈನಲ್ಲಿದ್ದಾನೆ ಎಂಬ ಆಘಾತಕಾರಿ ವಿಚಾರವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ ಪತ್ತೆಯಾದ ಬೃಹತ್ ನಕಲಿ ಔಷಧ ಜಾಲಕ್ಕೆ ಈಗ 'ಇಂಟರ್ನ್ಯಾಷನಲ್ ಲಿಂಕ್' ಇರುವುದು ಸ್ಪಷ್ಟವಾಗಿದೆ. ಬಿಡದಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದರ ಪ್ರಮುಖ ರೂವಾರಿ ದುಬೈನಲ್ಲಿದ್ದಾನೆ ಎಂಬ ಆಘಾತಕಾರಿ ವಿಚಾರವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬಿಚ್ಚಿಟ್ಟಿದ್ದಾರೆ. ಬೇರೆ ರಾಜ್ಯಗಳಿಂದ ನಕಲಿ ಔಷಧಿಗಳನ್ನು ತಂದು, ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಕಂಪನಿಗಳ ಲೇಬಲ್ ಅಂಟಿಸಿ ಆಸ್ಪತ್ರೆಗಳ ಐಸಿಯು ರೋಗಿಗಳಿಗೆ ನೀಡಲಾಗುತ್ತಿತ್ತು. ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಬೃಹತ್ ಅಂತಾರಾಷ್ಟ್ರೀಯ ಜಾಲದ ಹಿಂದೆ ಯಾರಿದ್ದಾರೆ? ದುಬೈನಿಂದ ಇದನ್ನು ನಿಯಂತ್ರಿಸುತ್ತಿರುವವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶೀಘ್ರದಲ್ಲೇ ಎಸ್.ಐ.ಟಿ ತನಿಖೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ.
Next Story

