ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದ ದಿಕ್ಸೂಚಿಯೇ? | Election 2026 Analysis

7 May 2026 7:44 AM IST

2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಇದು ಕೇವಲ ಐದು ರಾಜ್ಯಗಳ ಭವಿಷ್ಯವನ್ನಷ್ಟೇ ಅಲ್ಲ, ಬದಲಾಗಿ ಇಡೀ ರಾಷ್ಟ್ರ ರಾಜಕಾರಣದ ಮುಂದಿನ ದಿಕ್ಕನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಹಾಗಾದರೆ, ಈ ಚುನಾವಣಾ ಫಲಿತಾಂಶ ನೀಡುತ್ತಿರುವ ಅಸಲಿ "ದಿಕ್ಸೂಚಿ" ಏನು? ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಅವರ ಆಡಳಿತವನ್ನು ಅಂತ್ಯಗೊಳಿಸುವ ಮೂಲಕ ಬಿಜೆಪಿ ಪೂರ್ವ ಭಾರತದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಇತ್ತ ತಮಿಳುನಾಡಿನ ದ್ರಾವಿಡ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ನಟ 'ದಳಪತಿ' ವಿಜಯ್ ಅವರ ಟಿವಿಕೆ (TVK) ಪಕ್ಷ, ಆಡಳಿತಾರೂಢ ಡಿಎಂಕೆಯನ್ನು ಮಣಿಸಿ 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ! ಮತ್ತೊಂದೆಡೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಕಂಬ್ಯಾಕ್ ಮಾಡಿದ್ದು, ಇಡೀ ಭಾರತದಿಂದಲೇ ಎಡಪಕ್ಷಗಳ (Communist) ಆಡಳಿತವನ್ನು ಗುಡಿಸಿಹಾಕಿದೆ. ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಹ್ಯಾಟ್ರಿಕ್ ಬಾರಿಸಿದರೆ, ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಮರಳಿ ಅಧಿಕಾರ ಹಿಡಿದಿದೆ.