Yettinahole Project: ಬಫರ್ ಡ್ಯಾಂಗೆ ಭೂಮಿಕೊಡಲ್ಲ ಸಮಾಧಿ ಮೇಲೆ ಡ್ಯಾಂ ಕಟ್ಟಲಿ ಗ್ರಾಮಸ್ಥರ ಆಕ್ರೋಶ

7 May 2026 7:53 PM IST

ದೊಡ್ಡಬಳ್ಳಾಪುರದ ಗಡಿ ಭಾಗದಲ್ಲಿರುವ ಕೊರಟಗೆರೆ ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಬಫರ್ ಡ್ಯಾಮ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಡ್ಯಾಮ್ ನಿರ್ಮಾಣದಿಂದ ವಡೇರಹಳ್ಳಿ ,ಕಾಟೇನಹಳ್ಳಿ, ಅಂಕೋನಹಳ್ಳಿ, ನಾಯಕರಪಾಳ್ಯ, ಚೆಣಚೆಹಟ್ಟಿ, ನರಸಾಪುರ ಹಾಗೂ ಗಾಣದಹಟ್ಟಿ ಸೇರಿದಂತೆ ಏಳೆಂಟು ಗ್ರಾಮಗಳು ಮುಳುಗಡೆ ಆಗಲಿವೆ. ಡ್ಯಾಂ ನಿರ್ಮಾಣ ವಿರೋಧಿಸಿ ವಡೇರಹಳ್ಳಿ ಗ್ರಾಮಸ್ಥರು ಗುರುವಾರ ಕೊರಟಗೆರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ʼದ ಫೆಡರಲ್ ಕರ್ನಾಟಕʼ ಪ್ರತಿಭಟನಾನಿರತ ಗ್ರಾಮಸ್ಥರ ಜತೆ ಮಾತನಾಡಿಸಿದೆ.