ಕ್ವಿನ್ ಸಿಟಿ', 'ಡೇಟಾ ಸೆಂಟರ್', 'ಅಭಿವೃದ್ಧಿ'ಯ ಭಾರ ರೈತನ ತಲೆಯ ಮೇಲೆ ಹೊರಿಸಿತೇ ಸರ್ಕಾರ? ಅನಿರ್ದಿಷ್ಟಾವಧಿ ಧರಣಿ
ಒಂದೆಡೆ ಐಟಿ-ಬಿಟಿ ಮತ್ತು ಕೈಗಾರಿಕೆಗಳ ಹೆಸರಿನಲ್ಲಿ ಅಭಿವೃದ್ಧಿಯ ಜಪ, ಮತ್ತೊಂದೆಡೆ ತಮ್ಮ ಜಮೀನು ಉಳಿಸಿಕೊಳ್ಳಲು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರೈತ. ದೊಡ್ಡಬಳ್ಳಾಪುರದ ಅನ್ನದಾತರಿಗೆ ಈಗ ತಮ್ಮ ಸ್ವಂತ ನೆಲವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿಂದೆ 'ಕ್ವಿನ್ ಸಿಟಿ' (Queen City) ಪ್ರಾಜೆಕ್ಟ್ ಹೆಸರಿನಲ್ಲಿ ಭೂಸ್ವಾಧೀನದ ಕಾಟ ಅನುಭವಿಸಿದ್ದ ಈ ಭಾಗದ ರೈತರಿಗೆ, ಈಗ 'ಡೇಟಾ ಸೆಂಟರ್' (Data Center) ನಿರ್ಮಾಣದ ಹೆಸರಿನಲ್ಲಿ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ತಮ್ಮ ಜೀವನಾಧಾರವಾದ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ದೊಡ್ಡಬಳ್ಳಾಪುರದ ರೈತರು, ಸರ್ಕಾರದ ನಡೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಧರಣಿಗೆ ಇಳಿದಿದ್ದಾರೆ. "ನಮ್ಮ ಹೊಲಗಳಲ್ಲಿ ಸರ್ಕಾರವೇನು ಡೇಟಾ ಬೆಳೆಯುತ್ತಾ? ನಮಗೆ ಅನ್ನ ಕೊಡುವ ಮಣ್ಣನ್ನು ಕಿತ್ತುಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸುವುದು ಯಾವ ನ್ಯಾಯ?" ಎಂಬುದು ಪ್ರತಿಭಟನಾ ನಿರತ ರೈತರ ನೇರ ಪ್ರಶ್ನೆ.