ಭಾವಿ ಸಿಎಂ ಡಿಕೆಶಿಯ ಎಲ್ಲಾ ನಿರ್ಧಾರದಲ್ಲೂ ನೊಣವಿನಕೆರೆ ಅಜ್ಜಯ್ಯನ ಮಾತೇ ಫೈನಲ್! | DK Shivakumar CM
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ವಿಧಾನಸೌಧದಿಂದ ದೂರ ಉಳಿದಿದ್ದ ಜ್ಯೋತಿಷ್ಯ ಹಾಗೂ ಧಾರ್ಮಿಕತೆ ಈಗ ಮತ್ತೆ ಶಕ್ತಿ ಕೇಂದ್ರದಲ್ಲಿ ಮುನ್ನೆಲೆಗೆ ಬರಲಿದೆಯಾ ಎಂಬ ಕುತೂಹಲ ಶುರುವಾಗಿದೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ಪ್ರತಿಯೊಂದು ರಾಜಕೀಯ ಹೆಜ್ಜೆಯಲ್ಲೂ ತುರುವೇಕೆರೆ ತಾಲೂಕಿನ ನೊಣವಿನಕೆರೆ ಅಜ್ಜಯ್ಯನ ಮಠದ ಆಶೀರ್ವಾದ ಪಡೆದೇ ಮುಂದುವರಿಯುತ್ತಾರೆ. ಡಿಕೆಶಿಗೆ ಅಜ್ಜಯ್ಯನ ಮಾತೇ ಅಂತಿಮ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಒಳಗೆ ಹಾಗೂ ಹೊರಗೆ ಜ್ಯೋತಿಷ್ಯಶಾಸ್ತ್ರವನ್ನು ಎಂದೂ ಪ್ರೋತ್ಸಾಹಿಸಿರಲಿಲ್ಲ. ಆದರೆ, ಕಟ್ಟಾ ಆಸ್ತಿಕರಾದ ಮತ್ತು ಜ್ಯೋತಿಷ್ಯವನ್ನು ಬಲವಾಗಿ ನಂಬುವ ಡಿಕೆಶಿ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ, ವಿಧಾನಸೌಧಕ್ಕೆ ಜ್ಯೋತಿಷಿಗಳಿಗೆ ಮುಕ್ತ ರಹದಾರಿ ಸಿಗಲಿದೆಯೇ? ರಾಜ್ಯ ರಾಜಕಾರಣದ ಈ ಕುತೂಹಲಕಾರಿ ಬದಲಾವಣೆಯ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.