Thalapathy Vijay | ದಳಪತಿ ವಿಜಯ್‌ಗೆ ಕರ್ನಾಟಕದ ಅಭಿಮಾನಿಯ ಬೆಳ್ಳಿ ಪಾದುಕೆ!
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರಿಗೆ ಕರ್ನಾಟಕದ ಹೆಮ್ಮೆಯ ಸಾಧಕ ಗೌತಮ್ ವರ್ಮ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ. ಸಾಹಸಮಯ ಪ್ರದರ್ಶನಗಳ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗಿನ್ನಿಸ್ ದಾಖಲೆ ಬರೆದಿರುವ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೌತಮ್ ವರ್ಮ ಅವರು ನಟ ವಿಜಯ್ ಅವರ ದೊಡ್ಡ ಅಭಿಮಾನಿ. ವಿಜಯ್ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ನಟನಿಗಾಗಿ ವಿಶೇಷವಾಗಿ ತಯಾರಿಸಿದ ಬೆಳ್ಳಿ ಪಾದುಕೆ ಮತ್ತು ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಲು ಗೌತಮ್ ವರ್ಮ ಅವರು ತಮಿಳುನಾಡಿಗೆ ತೆರಳಿದ್ದಾರೆ. ಈ ಕುರಿತು ಅವರು 'ದ ಫೆಡರಲ್ ಕರ್ನಾಟಕ' ಜೊತೆ ಮಾತನಾಡಿ ತಮ್ಮ ಅಭಿಮಾನದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.