ಕಾಂಗ್ರೆಸ್ ಒಂದೇ ಬಸ್ಸಲ್ಲ, ಮುಸ್ಲಿಮರಿಗೆ 3 ಬಸ್ ಇವೆ! ಟಿಪ್ಪು ಸುಲ್ತಾನ್ ವಿ.ವಿ.ಗೆ ಇನಾಯತ್ ಉಲ್ಲಾ ಶಾಬಂದರಿ ಆಗ್ರಹ

16 May 2026 6:42 PM IST

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬೃಹತ್ ಮುಸ್ಲಿಂ ಸಮಾವೇಶ ನಡೆದಿದೆ. 'ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದೇನು? ಮಾಡಿದ್ದೇನು?' ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ ರಾಜ್ಯದ ನಾನಾ ಭಾಗಗಳಿಂದ ಚಿಂತಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ ಎಂದು ಸಮಾವೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಮಾವೇಶದ ಬಳಿಕ 'ದಿ ಫೆಡರಲ್ ಕರ್ನಾಟಕ'ದ ಜೊತೆ ವಿಶೇಷವಾಗಿ ಮಾತನಾಡಿದ ಭಟ್ಕಳ ತಂಜಿಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದರಿ ಅವರು, "ಮುಸ್ಲಿಮರಿಗೆ ಕಾಂಗ್ರೆಸ್ ಒಂದೇ ಬಸ್ಸಲ್ಲ, ಮೂರು ಬಸ್ ಗಳಿವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಮುಖಂಡರ ಅಸಮಾಧಾನವೇನು? ಇನಾಯತ್ ಉಲ್ಲಾ ಶಾಬಂದರಿ ಅವರ ಮುಂದಿನ ನಡೆಯೇನು? ಸಂಪೂರ್ಣ ಸಂದರ್ಶನಕ್ಕಾಗಿ ವಿಡಿಯೋ ವೀಕ್ಷಿಸಿ.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬೃಹತ್ ಮುಸ್ಲಿಂ ಸಮಾವೇಶ ನಡೆದಿದೆ. 'ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದೇನು? ಮಾಡಿದ್ದೇನು?' ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ ರಾಜ್ಯದ ನಾನಾ ಭಾಗಗಳಿಂದ ಚಿಂತಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ ಎಂದು ಸಮಾವೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಮಾವೇಶದ ಬಳಿಕ 'ದಿ ಫೆಡರಲ್ ಕರ್ನಾಟಕ'ದ ಜೊತೆ ವಿಶೇಷವಾಗಿ ಮಾತನಾಡಿದ ಭಟ್ಕಳ ತಂಜಿಮ್ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದರಿ ಅವರು, "ಮುಸ್ಲಿಮರಿಗೆ ಕಾಂಗ್ರೆಸ್ ಒಂದೇ ಬಸ್ಸಲ್ಲ, ಮೂರು ಬಸ್ ಗಳಿವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಮುಖಂಡರ ಅಸಮಾಧಾನವೇನು? ಇನಾಯತ್ ಉಲ್ಲಾ ಶಾಬಂದರಿ ಅವರ ಮುಂದಿನ ನಡೆಯೇನು? ಸಂಪೂರ್ಣ ಸಂದರ್ಶನಕ್ಕಾಗಿ ವಿಡಿಯೋ ವೀಕ್ಷಿಸಿ.