LIVE | ಕನ್ನಡ ಕಡೆಗಣಿಸುವ ಸಿಬಿಎಸ್​ಇ ಶಾಲೆಗಳಿಗೆ ಎನ್​​ಒಸಿ ನೀಡಬೇಡಿ: ಪ್ರೊ. ಪುರುಷೋತ್ತಮ ಬಿಳಿಮಲೆ | CBSE Schools

24 May 2026 5:54 PM IST

ಸಿಬಿಎಸ್‌ಇ (CBSE) ಶಾಲೆಗಳಿಗೆ ನೀಡುವ ನಿರಾಕ್ಷೇಪಣಾ ಪತ್ರದ (NOC) ನಿಯಮಗಳಲ್ಲಿ ಬದಲಾವಣೆ ತಂದು, ಪ್ರತಿ ವರ್ಷವೂ ಎನ್‌ಒಸಿ ನೀಡುವುದನ್ನು ಕಡ್ಡಾಯಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಿಬಿಎಸ್‌ಇ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಸದೇ ನಿರ್ಲಕ್ಷ್ಯ ತೋರುತ್ತಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರೊ. ಬಿಳಿಮಲೆ ಪತ್ರ ಬರೆದಿದ್ದಾರೆ. ಅಲ್ಲದೆ, ಅಧಿಕಾರವಿಲ್ಲದೆ ಪ್ರಾಧಿಕಾರ ಹಲ್ಲಿಲ್ಲದ ಹಾವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜ್ಯದ ಶಾಲೆಗಳಲ್ಲಿ ಕನ್ನಡದ ಭವಿಷ್ಯ, ಪ್ರಾಧಿಕಾರದ ಮುಂದಿರುವ ಸವಾಲುಗಳು ಹಾಗೂ ಕಠಿಣ ನಿಯಮಗಳ ಜಾರಿಯ ಅಗತ್ಯದ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ.