ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್ರಚನೆ ಬಿರುಗಾಳಿ:ಹೈಕಮಾಂಡ್ ಭೇಟಿಗೆ 20ಕ್ಕೂ ಹೆಚ್ಚು ಶಾಸಕರ ಮಾಸ್ಟರ್ ಪ್ಲಾನ್!
ರಾಜ್ಯ ಸರ್ಕಾರಕ್ಕೆ 3 ವರ್ಷ ತುಂಬುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಸಚಿವ ಸಂಪುಟ ಪುನರ್ರಚನೆಯ ಕೂಗು ಗಟ್ಟಿಯಾಗಿದೆ. ಹಾಲಿ ಇರುವ 25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ, 20ಕ್ಕೂ ಹೆಚ್ಚು ಹಿರಿಯ ಶಾಸಕರು ಮೇ ಕೊನೆಯ ವಾರದಲ್ಲಿ ದೆಹಲಿ ಭೇಟಿಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆಯೇ, 'ಈ ಬಾರಿ ಬರಿಗೈಲಿ ವಾಪಸ್ ಆಗಲ್ಲ' ಎಂದು ಪಟ್ಟು ಹಿಡಿದಿರುವ ಶಾಸಕರ ಈ ದೆಹಲಿ ಯಾತ್ರೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.