LIVE | ಬೌರಿಂಗ್ ಆಸ್ಪತ್ರೆಯ ಘಟನಾ ಸ್ಥಳದಲ್ಲಿ ಏನೆಲ್ಲಾ ಆಯಿತು, ಈಗ ಹೇಗಿದೆ ಪರಿಸ್ಥಿತಿ?
ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ. ಮೃತರು ಫುಟ್‌ಪಾತ್ ನಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮಳೆ ಜೋರಾದ ಹಿನ್ನೆಲೆ ಎಲ್ಲರೂ ಟಾರ್ಪಲ್ ಅಡಿ ನಿಂತುಕೊಂಡಿದ್ದರು. ಈ ವೇಳೆ ಗೋಡೆ ದಿಢೀರ್ ಕುಸಿದಿದೆ. ಇಬ್ಬರು ಮಕ್ಕಳು ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಅವಶೇಷಗಳಡಿ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.