LIVE | ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ನಿರ್ಣಯಕ್ಕೆ ಮಹಾನಗರ ಪಾಲಿಕೆ ಹಿಂಜರಿಕೆ?
ಕುಂದಾನಗರ ಬೆಳಗಾವಿಯಲ್ಲಿ ಮತ್ತೆ ಭಾಷಾ ಕಿಡಿ ಹೊತ್ತಿಕೊಂಡಿದೆ. "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂದು ಅಧಿಕೃತ ನಿರ್ಣಯ ಕೈಗೊಳ್ಳುವ ಮಹತ್ವದ ಪ್ರಸ್ತಾವನೆಗೆ ಬೆಳಗಾವಿ ಮಹಾನಗರ ಪಾಲಿಕೆಯು ಸದ್ಯಕ್ಕೆ ಬ್ರೇಕ್ ಹಾಕಿದೆ. ಗಡಿ ವಿವಾದದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದನ್ನು ಉಲ್ಲೇಖಿಸಿರುವ ಪಾಲಿಕೆ, ಈ ಬಗ್ಗೆ ಮೊದಲು ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಪಡೆದುಕೊಳ್ಳಲು ತೀರ್ಮಾನಿಸಿದೆ. ಆದರೆ, ಪಾಲಿಕೆಯ ಈ ಆಮೆಗತಿಯ ನಡೆ ಹಾಗೂ ಹಿಂಜರಿಕೆಯನ್ನು ಕಟುವಾಗಿ ಟೀಕಿಸಿರುವ ಕನ್ನಡಪರ ಸಂಘಟನೆಗಳು, ಗಡಿ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಬೃಹತ್ ಹೋರಾಟಕ್ಕೆ ಸಜ್ಜಾಗಿವೆ. ಮಹಾನಗರ ಪಾಲಿಕೆಯ ಈ ವಿವಾದಾತ್ಮಕ ನಿರ್ಧಾರದ ಸಂಪೂರ್ಣ ವರದಿ ಈ ವಿಡಿಯೋದಲ್ಲಿದೆ.