ಇರಾನ್ ದಾಳಿಗೆ ತತ್ತರಿಸಿದ ಅಮೆರಿಕ:ಯುದ್ಧದಿಂದ ದೊಡ್ಡಣ್ಣನಿಗೆ ಸಾವಿರಾರು ಕೋಟಿ ನಷ್ಟ |US-Iran War Economic Impact

27 April 2026 11:25 AM IST

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧ ಇದೀಗ ಅಮೆರಿಕದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇರಾನ್‌ನ ಭೀಕರ ಪ್ರತಿದಾಳಿಯಿಂದಾಗಿ ಕೊಲ್ಲಿ ಪ್ರದೇಶದಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳು, ಅತ್ಯಾಧುನಿಕ F-35 ಮತ್ತು F-15E ಯುದ್ಧ ವಿಮಾನಗಳು, ಕಮಾಂಡ್ ಕೇಂದ್ರಗಳು ಹಾಗೂ ಅತಿ ದೊಡ್ಡ ರಾಡಾರ್ ವ್ಯವಸ್ಥೆಗಳು ಧ್ವಂಸವಾಗಿವೆ. ವರದಿಗಳ ಪ್ರಕಾರ, ಈ ಯುದ್ಧದಿಂದ ಅಮೆರಿಕಕ್ಕೆ ಪ್ರತಿದಿನ ಅಂದಾಜು $1.2 ಬಿಲಿಯನ್ ನಷ್ಟವಾಗುತ್ತಿದ್ದು, ಏಪ್ರಿಲ್ ವರೆಗೆ ಬರೋಬ್ಬರಿ $70 ಬಿಲಿಯನ್ (ಸುಮಾರು 65.99 ಲಕ್ಷ ಕೋಟಿ ರೂ.) ಖರ್ಚಾಗಿದೆ ಎನ್ನಲಾಗಿದೆ. ಜೊತೆಗೆ ಇರಾನ್ ಜಾಗತಿಕ ತೈಲ ಸಾಗಾಣಿಕಾ ಮಾರ್ಗವಾದ 'ಹೊರ್ಮುಜ್ ಜಲಸಂಧಿ'ಯನ್ನು ಬಂದ್ ಮಾಡಿದ್ದು ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಅಮೆರಿಕದ ಬೊಕ್ಕಸಕ್ಕೆ ಆಗುತ್ತಿರುವ ಅಗಾಧ ನಷ್ಟ, ಪೆಂಟಗನ್‌ನ ಬಿಲಿಯನ್ ಡಾಲರ್ ಬೇಡಿಕೆಗಳು ಹಾಗೂ ಈ ಬಗ್ಗೆ ಟ್ರಂಪ್ ಆಡಳಿತದ ಮೌನದ ಕುರಿತಾದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.