ರಾಜ್ಯದಲ್ಲಿ ಕೃಷಿ ಕ್ರಾಂತಿ: ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆದು ಮಾರುಕಟ್ಟೆಗೆ ಬಂತು ರೈತರದ್ದೇ ಬಿತ್ತನೆ ಬೀಜ!

8 May 2026 7:16 PM IST

ರಾಜ್ಯದ ರೈತರಿಗೆ ಕೃಷಿ ಇಲಾಖೆಯಿಂದ ಭರ್ಜರಿ ಸಿಹಿಸುದ್ದಿ! ಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಸೆಡ್ಡು ಹೊಡೆದು, ರೈತರು ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ 'ಸಾಂಪ್ರದಾಯಿಕ ತಳಿಗಳ ಬಿತ್ತನೆ ಬೀಜ'ಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೃಷಿ ಇಲಾಖೆ ಅವಕಾಶ ಕಲ್ಪಿಸಿದೆ.ಹೌದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರೈತರ ಹೆಸರಲ್ಲೇ ಬಿತ್ತನೆ ಬೀಜ ತಯಾರಾಗಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆದಿದೆ. ಕೃಷಿ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸುದೀರ್ಘ ಸಂಶೋಧನೆಯ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ರೈತರು ಕೇವಲ ಬೆಳೆಗಾರರಷ್ಟೇ ಅಲ್ಲ, ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರಾಗಿಯೂ ಬೆಳೆಯಲಿದ್ದಾರೆ. ಈ ಕೃಷಿ ಕ್ರಾಂತಿಯ ಸಂಪೂರ್ಣ ಮಾಹಿತಿ, ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ? ರೈತರಿಗೆ ಆಗುವ ಲಾಭಗಳೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಮಂಜು. ಎ.ಸಿ. ಅವರು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ