ವಾಹನ ನೋಂದಣಿಗೆ ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲು ಕರ್ನಾಟಕ ಸರ್ಕಾರ ನಿರ್ಧಾರ?
ಆಸ್ತಿ ನೋಂದಣಿಗೆ ಆಧಾರ್, ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಕಡ್ಡಾಯ ಮಾಡಿರುವಂತೆ ಹೊಸ ವಾಹನಗಳ ನೋಂದಣಿಗೂ 'ಆಧಾರ್ ಇ-ಕೆವೈಸಿ' ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಚಾಲನಾ ಪರವಾನಗಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ಮಾದರಿಯಲ್ಲಿ ವಾಹನ ಮಾಲೀಕರ ವಿಳಾಸ ಮತ್ತು ಗುರುತನ್ನು ನಿಖರವಾಗಿ ಪತ್ತೆಹಚ್ಚುವ ಸಲುವಾಗಿ ಆಧಾರ್ ಲಿಂಕ್ ಗೆ ತೀರ್ಮಾನಿಸಲಾಗಿದೆ. ಇದರಿಂದ ನಕಲಿ ವಿಳಾಸ ನೀಡಿ ವಾಹನ ನೋಂದಣಿ ಮಾಡುವ ಪ್ರಕರಣಗಳಿಗೆ ಬ್ರೇಕ್ ಬೀಳಲಿದೆ.

ಆಸ್ತಿ ನೋಂದಣಿಗೆ ಆಧಾರ್, ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಕಡ್ಡಾಯ ಮಾಡಿರುವಂತೆ ಹೊಸ ವಾಹನಗಳ ನೋಂದಣಿಗೂ 'ಆಧಾರ್ ಇ-ಕೆವೈಸಿ' ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಚಾಲನಾ ಪರವಾನಗಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ಮಾದರಿಯಲ್ಲಿ ವಾಹನ ಮಾಲೀಕರ ವಿಳಾಸ ಮತ್ತು ಗುರುತನ್ನು ನಿಖರವಾಗಿ ಪತ್ತೆಹಚ್ಚುವ ಸಲುವಾಗಿ ಆಧಾರ್ ಲಿಂಕ್ ಗೆ ತೀರ್ಮಾನಿಸಲಾಗಿದೆ. ಇದರಿಂದ ನಕಲಿ ವಿಳಾಸ ನೀಡಿ ವಾಹನ ನೋಂದಣಿ ಮಾಡುವ ಪ್ರಕರಣಗಳಿಗೆ ಬ್ರೇಕ್ ಬೀಳಲಿದೆ.

