ಪಹಲ್ಗಾಮ್ ದಾಳಿ ನಂತರ ಪ್ರವಾಸೋದ್ಯಮದ ಬಗ್ಗೆ ಸಂಪೂರ್ಣ ವಿಶ್ಲೇಷಣೆ
ಭಾರತೀಯ ಪ್ರವಾಸೋದ್ಯಮ ಇತಿಹಾಸದಲ್ಲಿ ಏ.22 ಅತ್ಯಂತ ಕರಾಳ ದಿನ. ಭೂಮಿಯ ಮೇಲಿನ ಸ್ವರ್ಗ ಎಂದೇ ಖ್ಯಾತಿಯಾಗಿರುವ ಜಮ್ಮು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದರು. 25 ಪ್ರವಾಸಿಗರು, ಒಬ್ಬ ಸ್ಥಳೀಯ ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದರು. ಈ ದುರ್ಘಟನೆಯಿಂದ ಜಮ್ಮು ಕಾಶ್ಮೀರದ ಆರ್ಥಿಕ ಮೂಲವಾಗಿದ್ದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ʼಆಪರೇಷನ್ ಆಲೌಟ್ʼ ಹಾಗೂ ʼಆಪರೇಷನ್ ಸಿಂಧೂರʼ ಮೂಲಕ ಕೇಂದ್ರ ಸರ್ಕಾರವು ಭಯೋತ್ಪಾದನೆಗೆ ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿತ್ತು.