ರಕ್ತಸಿಕ್ತ ರಾತ್ರಿಯ ವೀರ ವನಿತೆಯರು: 26/11ರ ದಾಳಿಯಲ್ಲಿ ಇತಿಹಾಸ ಬರೆದ ನರ್ಸ್‌ಗಳು
26/11 ಮುಂಬೈ ಉಗ್ರರ ದಾಳಿಯ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಕಾಮಾ ಆಸ್ಪತ್ರೆಯಲ್ಲಿ ನಡೆದ ಈ ನಿಜಘಟನೆ ಅಷ್ಟಾಗಿ ಬೆಳಕಿಗೆ ಬಂದಿಲ್ಲ. 2008ರ ನವೆಂಬರ್ 26ರಂದು ಉಗ್ರರು ಕಾಮಾ ಆಸ್ಪತ್ರೆಗೆ ನುಗ್ಗಿದಾಗ, ಅಲ್ಲಿದ್ದ ನರ್ಸ್‌ಗಳು ಮತ್ತು ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು 150ಕ್ಕೂ ಹೆಚ್ಚು ರೋಗಿಗಳನ್ನು ರಕ್ಷಿಸಿದರು. ಅದರಲ್ಲೂ 20ಕ್ಕೂ ಹೆಚ್ಚು ಗರ್ಭಿಣಿಯರನ್ನು ಸುರಕ್ಷಿತವಾಗಿರಿಸಿ, ಗುಂಡಿನ ಮಳೆಯ ನಡುವೆಯೇ ಒಂದು ಹೆಣ್ಣು ಮಗುವಿನ ಹೆರಿಗೆ ಮಾಡಿಸಿದ ಘಟನೆ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಅಸಾಧಾರಣ ಸಾಹಸಗಾಥೆಯನ್ನು ಆಧರಿಸಿ ನಿರ್ಮಾಣವಾಗಿರುವ "ಭಾರತ ಭಾಗ್ಯ ವಿಧಾತ" ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ನಟಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 26/11ರ ಅಜ್ಞಾತ ಹೀರೋಗಳ ಕಥೆಯನ್ನು ತೆರೆಗೆ ತರುತ್ತಿದೆ.