ನೇರಳೆ ಹಣ್ಣಿನ ಬಂಪರ್ ಫಸಲು: ಬರಗಾಲದ ಎಚ್ಚರಿಕೆಯೇ? ತಜ್ಞರು ಹೇಳುವುದೇನು? | Dr. G.S.K Swamy
ಈ ವರ್ಷ ಗ್ರಾಮೀಣ ಭಾಗಗಳಲ್ಲಷ್ಟೇ ಅಲ್ಲದೆ ನಗರ ಪ್ರದೇಶಗಳಲ್ಲೂ ನೇರಳೆ ಮರಗಳು ಹಿಂದೆಂದೂ ಕಾಣದಷ್ಟು ಕಡು ನೇರಳೆ ಬಣ್ಣದ ಹಣ್ಣುಗಳಿಂದ ಕಂಗೊಳಿಸುತ್ತಿವೆ. ಬಂಪರ್ ಫಸಲು ಬಂದಿದೆ. ಆದರೆ, ಇದರ ಹಿಂದೆಯೇ ಒಂದು ಆತಂಕದ ಚರ್ಚೆ ಶುರುವಾಗಿದೆ. ನಮ್ಮ ಹಿರಿಯರ ನಂಬಿಕೆಯ ಪ್ರಕಾರ—'ನೇರಳೆ ಅತಿಯಾಗಿ ಬಿಟ್ಟರೆ, ಭೀಕರ ಬರಗಾಲದ ಮುನ್ಸೂಚನೆ' ಎಂದು. ಹಾಗಾದರೆ ಈ ಭರ್ಜರಿ ಫಸಲು ಪ್ರಕೃತಿ ನಮಗೆ ಕೊಡುತ್ತಿರುವ ಬರಗಾಲದ ಮುನ್ಸೂಚನೆಯೇ? ಅಥವಾ ಇದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ? ವಿಜ್ಞಾನ ಹೇಳುವ 'ಸ್ಟ್ರೆಸ್ ಫ್ರೂಟಿಂಗ್' ಎಂದರೇನು? ಮರಗಳು ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ಪರಿಸರದ ಹವಾಮಾನ ವೈಪರೀತ್ಯವನ್ನು ಮೊದಲೇ ಗ್ರಹಿಸುತ್ತವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ, ಜನಸಾಮಾನ್ಯರ ಹಾಗೂ ರೈತರ ಗೊಂದಲಗಳಿಗೆ ವೈಜ್ಞಾನಿಕ ಮತ್ತು ಪ್ರಾಯೋಗಿಕ ಸತ್ಯಗಳನ್ನು ಬಿಚ್ಚಿಡಲು ನಮ್ಮ ಜೊತೆಗಿದ್ದಾರೆ ಬೆಂಗಳೂರಿನ ತೋಟಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಆಗಿರುವ ಡಾ. ಜಿ. ಎಸ್. ಕೆ. ಸ್ವಾಮಿ. ಆಂಕರ್ ಪೂರ್ಣಿಮಾ ಪೆರ್ಣಂಕಿಲ ನಡೆಸಿರುವ ಈ ವಿಶೇಷ ಸಂದರ್ಶನವನ್ನು ತಪ್ಪದೇ ಪೂರ್ತಿ ವೀಕ್ಷಿಸಿ.