Jet Airways: ಜೆಟ್ ಏರ್‌ವೇಸ್ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ
Jet Airways: ಜೆಟ್ ಏರ್‌ವೇಸ್ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಜೆಸಿ ಫ್ಲವರ್ಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.
ಆರ್ಥಿಕವಾಗಿ ದಿವಾಳಿಯಾಗಿರುವ ವಿಮಾನಯಾನ ಸಂಸ್ಥೆ ಜೆಟ್‌ಏರ್‌ವೇಸ್‌ಗೆ ಸೇರಿರುವ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿ ಸಾಲಗಾರರಿಗೆ ಮರುಪಾವತಿ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ತನ್ನ ಅಸಾಧಾರಣ ಸಾಂವಿಧಾನಿಕ ಅಧಿಕಾರ ಬಳಸಿಕೊಂಡ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದ್ದು, ) ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ತೀರ್ಪವನ್ನು ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಗುರುವಾರ (ನವೆಂಬರ್ 7) ಈ ತೀರ್ಪು ಪ್ರಕಟಿಸಿದ್ದಾರೆ. ಇದೇ ವೇಳೆ ಸಂಸ್ಥೆಯ ಮಾಲೀಕತ್ವವನ್ನು ಜಲನ್ ಕಲ್ರಾಕ್ ಕನ್ಸೋರ್ಟಿಯಂಗೆ ನೀಡಲು ಸಮ್ಮತಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLT) ತೀರ್ಪಿನ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಹೊರತಾಗಿಯೂ ಜೆಟ್ ಏರ್‌ವೇಸ್‌ನ ಪರಿಹಾರ ಯೋಜನೆಯನ್ನು ಎತಿ ಹಿಡಿದಕ್ಕಾಗಿ ಮತ್ತು ಅದರ ಮಾಲೀಕತ್ವವನ್ನು ಜಲನ್ ಕಲ್ರಾಕ್ ಕನ್ಸೋರ್ಟಿಯಂ (ಜೆಕೆಸಿ) ಗೆ ವರ್ಗಾಯಿಸಲು ಅನುಮೋದನೆ ನೀಡಿರುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಜೆಸಿ ಫ್ಲವರ್ಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಸುಪ್ರೀಂ ಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಆ ಅರ್ಜಿಗಳನ್ನು ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್ ಮಾರಾಟಕ್ಕೆ ಅವಕಾಶ ಕಲ್ಪಿಸಿತು.
ವಿಮಾನಯಾನ ಸಂಸ್ಥೆ ದಿವಾಳಿತನಕ್ಕೆ ಸುಪ್ರೀಂ ಕೋರ್ಟ್ ಆದೇಶ
ತೀರ್ಪನ್ನು ಪ್ರಕಟಿಸಿದ ನ್ಯಾಯಮೂರ್ತಿ ಪರ್ಡಿವಾಲಾ ಅವರು ವಿಮಾನಯಾನ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಲು ಎಸ್‌ಬಿಐ ಮತ್ತು ಇತರ ಸಾಲಗಾರರ ಮಾಡಿದ ಮನವಿಗೆ ಅನುಮತಿ ನೀಡಿದರು. ಸಾಲಗಾರರು,ಕಾರ್ಮಿಕರು ಮತ್ತು ಇತರ ಪಾಲುದಾರರ ಹಿತದೃಷ್ಟಿಯಿಂದವಿಮಾನಯಾನ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ ಅನುಚ್ಛೇದ 142ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರ ಬಳಸಿದೆ. ಈ ವಿಧಿಯು ತನ್ನ ಮುಂದೆ ಬಾಕಿ ಇರುವ ಯಾವುದೇ ವಿಷಯ ಅಥವಾ ಯಾವುದೇ ಕಾರಣಕ್ಕಾಗಿ ಸಂಪೂರ್ಣ ನ್ಯಾಯ ನೀಡುವ ಮತ್ತು ಆದೇಶಗಳನ್ನು ಕೊಡುವ ಅಧಿಕಾರವನ್ನು ನೀಡುತ್ತದೆ.
ಎನ್ಸಿಎಲ್ಎಟಿ ಮಾರ್ಚ್ 12ರಂದು ಸ್ಥಗಿತಗೊಂಡಿದ್ದ ಜೆಟ್ ಏರ್‌ವೇಸ್ ವಾಯುಯಾನ ಸಂಸ್ಥೆಯ ಪರಿಹಾರ ಯೋಜನೆಯನ್ನು ಎತ್ತಿಹಿಡಿದಿತ್ತು. ಅದರ ಮಾಲೀಕತ್ವವನ್ನು ಜೆಕೆಸಿಗೆ ವರ್ಗಾಯಿಸಲು ಅನುಮೋದನೆ ಕೊಟ್ಟಿತ್ತು.