ವಯನಾಡನ್ನು ವಿಶ್ವದ ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವೆ; ರಾಹುಲ್ ಪ್ರತಿಜ್ಞೆ
x
ವಯನಾಡ್‌ ರ್ಯಾಲಿಯಲ್ಲಿ ರಾಹುಲ್‌ ಮತ್ತು ಪ್ರಿಯಾಂಕ ಗಾಂಧಿ.

ವಯನಾಡನ್ನು ವಿಶ್ವದ ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವೆ; ರಾಹುಲ್ ಪ್ರತಿಜ್ಞೆ

ಕೇರಳದ ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪ್ರಚಾರ ನಡೆಸಿದರು.


ಲೋಕಸಭೆ ಉಪಚುನಾವಣೆಯ ಪ್ರಚಾರದ ಅಂತಿಮ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಅಬ್ಬರದ ಪ್ರಚಾರ ನಡೆಸಿದ್ದರು. ಈ ವೇಳೆ ಅವರು ಕೇರಳದ ವಯನಾಡನ್ನು "ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣ" ಮಾಡುವೆ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾರೆ .

"ಇದೊಂದು ಸವಾಲುpriyanka gandhi wayanad election,wayanad by election 2024,wayanad by election,priyanka gandhi wayanad,wayanad,priyanka gandhi at wayanad,priyanka gandhi in wayanad,wayanad by election date,priyanka gandhi wayanad by poll,wayanad by elections,wayanad by election news,wayanad lok sabha election 2024,priyanka gandhi wayanad bypolls,wayanad elections,rahul gandhi wayanad,wayanad bypoll,wayanad bypolls,election 2024,wayanad by election news malayalam. ವಯನಾಡ್ ಅನ್ನು ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಾನು ಪ್ರಿಯಾಂಕಾ ಗಾಂಧಿಗೆ ಸಹಾಯ ಮಾಡುತ್ತೇನೆ" ಎಂದು ರಾಹುಲ್ ಸಭೆಯೊಂದರಲ್ಲಿ ಹೇಳಿದ್ದಾರೆ. ನಂತರ ಪ್ರಿಯಾಂಕಾ ಅವರೊಂದಿಗೆ ಸುಲ್ತಾನ್ ಬತ್ತೇರಿ ಪ್ರದೇಶದ ಅಸಂಪ್ಷನ್ ಜಂಕ್ಷನ್‌ನಿಂದ ಚುಂಗಮ್ ಜಂಕ್ಷನ್‌ವರೆಗೆ ರೋಡ್‌ಶೋ ನಡೆಸಿದರು. .

ಪ್ರೀತಿಯ ಶಕ್ತಿ

ರಾಜಕೀಯದಲ್ಲಿ ಪ್ರೀತಿ ಎಂಬ ಪದಕ್ಕೆ ದೊಡ್ಡ ಸ್ಥಾನವಿದೆ ಎಂಬುದನ್ನು ವಯನಾಡ್ ಕಲಿಸಿದೆ ಎಂದು ರಾಹುಲ್ ಹೇಳಿದರು. "ನಾನು ಆ ಪದವನ್ನುಎಂದಿಗೂ ಬಳಸಲಿಲ್ಲ ಆದರೆ ವಯನಾಡಿನ ಜನರು ನನಗೆ ರಾಜಕೀಯದಲ್ಲಿ ಈ ಸ್ಥಾನಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ " ಎಂದು ಹೇಳಿದರು.

ದ್ವೇಷ ಮತ್ತು ಕೋಪವನ್ನು ಎದುರಿಸಲು ಪ್ರೀತಿ ಮತ್ತು ವಾತ್ಸಲ್ಯ ಏಕೈಕ ಅಸ್ತ್ರ ಎಂದು ಅವರು ಹೇಳಿದರು.

ಜನಸಮೂಹ ಗಾಂಧಿಯವರನ್ನು ಹುರಿದುಂಬಿಸುತ್ತದೆ

ಅಸಂಪ್ಷನ್ ಜಂಕ್ಷನ್‌ನಿಂದ ಚುಂಗಮ್ ಜಂಕ್ಷನ್‌ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಪ್ರಮಾಣದ ಜನರು ಜಮಾಯಿಸಿ ಪ್ರಿಯಾಂಕ ಮತ್ತು ರಾಹುಲ್‌ ಗಾಂಧಿಯನ್ನು ಹುರಿದುಂಬಿಸಿದರು.

ಈ ವರ್ಷದ ಸಂಸತ್ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಗೆಲುವು ಸಾಧಿಸಿದ ನಂತರ ರಾಹುಲ್ ವಯನಾಡ್‌ ಕ್ಷೇತ್ರವನ್ನುತ್ಯಜಿಸಿದ್ದರು. ಹೀಗಾಗಿ ನವೆಂಬರ್ 13 ರಂದು ವಯನಾಡ್ ಉಪಚುನಾವಣೆ ನಡೆಯಲಿದೆ.

Read More
Next Story