ಕಾವೇರಿ ಇಲ್ಲದಿದ್ದರೆ ರಾಜ್ಯ ರಾಜಧಾನಿ ಉಳಿಯುತ್ತಾ? ಕೆರೆಗಳ ನಗರಕ್ಕೆ ಇದೆಂಥಾ ಸಂಕಷ್ಟ?
ಕೆಂಪೇಗೌಡರು ಕಟ್ಟಿದ ಈ ನಗರದಲ್ಲಿ ಕುಡಿಯುವ ನೀರಿಗೆ ಯಾವತ್ತೂ ಕ್ಷಾಮವಿರಲಿಲ್ಲ. ಆದರೆ ಇವತ್ತು,ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಕಾವೇರಿ ನೀರು ಬಾರದಿದ್ದರೆ ಈ ನಗರಕ್ಕೆ ಒಂದೇ ಒಂದು ದಿನವೂ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.


