x

ಒಂದೇ ವಾರದಲ್ಲಿ ಗೋಧಿ ಬೆಲೆ ಶೇ.20 ಏರಿಕೆ! | ಅಡುಗೆ ಮನೆಯ ಬಜೆಟ್‌ಗೆ ಮತ್ತೊಂದು ಹೊಡೆತ

ಅಕ್ಕಿ, ಬೇಳೆ, ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಗೋಧಿ ದರವೂ ಏರಿಕೆಯಾಗಿದೆ. ವಾರದಲ್ಲೇ ಶೇ.20ರಷ್ಟು ಹೆಚ್ಚಳವಾಗಿದ್ದು, ಕ್ವಿಂಟಾಲ್‌ಗೆ 5,200 ರೂ. ತಲುಪಿದೆ. 6,000 ರೂ. ದಾಟುವ ಆತಂಕ.


Click the Play button to hear this message in audio format

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ. ಅಕ್ಕಿ, ಬೇಳೆ, ಸಕ್ಕರೆ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಗೋಧಿ ದರವೂ ಗಗನಕ್ಕೇರಿದೆ. ಕೇವಲ ಒಂದು ವಾರದಲ್ಲೇ ಗೋಧಿ ಬೆಲೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದ್ದು, ಕ್ವಿಂಟಾಲ್‌ಗೆ 5,200 ರೂ.ವರೆಗೆ ತಲುಪಿದೆ. ಉತ್ಪಾದನೆ ಕುಸಿತ ಮತ್ತು ಪೂರೈಕೆ ಕೊರತೆಯಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬ್ರ್ಯಾಂಡೆಡ್ ಗೋಧಿ ಬೆಲೆ 6,000 ರೂ. ದಾಟುವ ಆತಂಕವಿದೆ. ಹಬ್ಬದ ಸಂದರ್ಭದಲ್ಲಿ ಚಪಾತಿ, ಹೋಳಿಗೆ ಸೇರಿದಂತೆ ಗೋಧಿ ಖಾದ್ಯಗಳನ್ನು ತಯಾರಿಸಲು ಮುಂದಾಗಿರುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈಗಾಗಲೇ ಹಾಲು, ಮೊಸರು ಮತ್ತು ಬಸ್ ಪ್ರಯಾಣ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಗೋಧಿ ಬೆಲೆ ಏರಿಕೆ ಮತ್ತೊಂದು ಹೊಡೆತ ನೀಡಿದೆ.

Read More
Next Story