ಗಣಿ ಮಾಲೀಕರಿಂದ ಅನಿರ್ದಿಷ್ಟ ಮುಷ್ಕರ
ದ್ವಿಗುಣ ತೆರಿಗೆ ಸಂಗ್ರಹ ವಿರೋಧಿಸಿ ತುಮಕೂರಿನ ಗಣಿ, ಕ್ರಷರ್ ಮಾಲೀಕರು ಸೆ.18ರಿಂದ ಉತ್ಪಾದನೆ ಹಾಗೂ ಕಲ್ಲು, ಜಲ್ಲಿ ಪೂರೈಕೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ತುಮಕೂರಿನಲ್ಲಿ ಗಣಿ ಮತ್ತು ಕಲ್ಲು ಕ್ರಷರ್ ಮಾಲೀಕರ ಸಂಘದಿಂದ ತೆರಿಗೆ ಸಂಗ್ರಹದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗಣಿ ಮತ್ತು ಕ್ರಷರ್ ಮಾಲೀಕರಿಂದ ಒಂದೇ ಬಂಡವಾಳದ ಮೇಲೆ ಎರಡು ಬಾರಿ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ದಾರೆ. ತೆರಿಗೆ ವಿಧಿಸುವ ಹಾಗೂ ಸಂಗ್ರಹಿಸುವ ವಿಚಾರದಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಿಂದ ಗಣಿ ಮತ್ತು ಕ್ರಷರ್ಗಳ ಉತ್ಪಾದನೆ ಹಾಗೂ ಕಲ್ಲು, ಜಲ್ಲಿಯ ಪೂರೈಕೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ನಿರ್ಮಾಣ ಕ್ಷೇತ್ರಕ್ಕೆ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ತೆರಿಗೆ ನಿಯಮಗಳಲ್ಲಿ ಸ್ಪಷ್ಟತೆ ಹಾಗೂ ದ್ವಿಗುಣ ತೆರಿಗೆ ಸಂಗ್ರಹಕ್ಕೆ ಕಡಿವಾಣ ಹಾಕುವಂತೆ ಸಂಘ ಸರ್ಕಾರವನ್ನು ಆಗ್ರಹಿಸಿದೆ.
Next Story

