ಸಿನಿಮಾ ಮೊದಲು 22 ನಿಮಿಷ ಜಾಹೀರಾತು, ಪ್ರೇಕ್ಷಕ ಕೋರ್ಟ್ಗೆ, ಥಿಯೇಟರ್ಗೆ 75 ಸಾವಿರ ರೂ. ದಂಡ
‘ಕುಬೇರ’ ಸಿನಿಮಾ ಆರಂಭಕ್ಕೂ ಮುನ್ನ 22 ನಿಮಿಷ ಜಾಹೀರಾತು ಪ್ರಸಾರ ಮಾಡಿದ್ದಕ್ಕೆ ಹೈದರಾಬಾದ್ ಥಿಯೇಟರ್ಗೆ 75 ಸಾವಿರ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ.
ಸಿನಿಮಾ ನೋಡಲು ಥಿಯೇಟರ್ಗೆ ಹೋಗುವ ಪ್ರೇಕ್ಷಕರಿಗೆ ಜಾಹೀರಾತುಗಳ ಕಾಟ ಸಾಮಾನ್ಯ. ಆದರೆ ಸಿನಿಮಾ ಆರಂಭಕ್ಕೂ ಮುನ್ನ ಬರೋಬ್ಬರಿ 22 ನಿಮಿಷಗಳ ಕಾಲ ಜಾಹೀರಾತು ಮತ್ತು ಬ್ರ್ಯಾಂಡ್ ಪ್ರಚಾರ ಪ್ರಸಾರ ಮಾಡಿದ್ದಕ್ಕೆ ಇದೀಗ ಥಿಯೇಟರ್ಗೆ 75 ಸಾವಿರ ರೂ. ದಂಡ ವಿಧಿಸಲಾಗಿದೆ. ಧನುಷ್ ಮತ್ತು ನಾಗಾರ್ಜುನ ಅಭಿನಯದ ‘ಕುಬೇರ’ ಸಿನಿಮಾ ನೋಡಲು ಹೈದರಾಬಾದ್ನ ಥಿಯೇಟರ್ಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ರಾತ್ರಿ 10.35ಕ್ಕೆ ಸಿನಿಮಾ ಆರಂಭವಾಗಬೇಕಿತ್ತು. ಆದರೆ ಸಿನಿಮಾ ಆರಂಭಿಸುವ ಬದಲು ಸತತ 22 ನಿಮಿಷಗಳ ಕಾಲ ಜಾಹೀರಾತು ಪ್ರಸಾರ ಮಾಡಲಾಗಿದೆ. ಇದರಿಂದ ಬೇಸತ್ತ ಪ್ರೇಕ್ಷಕರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಥಿಯೇಟರ್ಗೆ ಒಟ್ಟು 75 ಸಾವಿರ ರೂಪಾಯಿ ಪಾವತಿಸುವಂತೆ ಆದೇಶಿಸಿದೆ. ಸಿನಿಮಾ ಟಿಕೆಟ್ ಖರೀದಿಸುವ ಪ್ರೇಕ್ಷಕರ ಹಕ್ಕುಗಳೇನು? ಥಿಯೇಟರ್ಗಳಲ್ಲಿ ಜಾಹೀರಾತು ಪ್ರಸಾರಕ್ಕೆ ಯಾವುದೇ ಮಿತಿ ಇದೆಯೇ? ಈ ಪ್ರಕರಣದಲ್ಲಿ ನ್ಯಾಯಾಲಯ ಏನು ಹೇಳಿದೆ? ಸಂಪೂರ್ಣ ಮಾಹಿತಿ ವಿಡಿಯೊದಲ್ಲಿದೆ.
Next Story

